ADVERTISEMENT

ಕೆಸರು ಗದ್ದೆ ಕ್ರೀಡೆ: ಸಂಭ್ರಮದಲ್ಲಿ ಮುಳುಗೆದ್ದ ಯುವಜನ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 3:56 IST
Last Updated 10 ಆಗಸ್ಟ್ 2022, 3:56 IST
ಕೊಂಡಜ್ಜಿಯಲ್ಲಿ ನಡೆದ ಕೆಸರುಗದ್ದೆ ಕ್ರೀಡೆಯಲ್ಲಿ ಹಗ್ಗಜಗ್ಗಾಟದಲ್ಲಿ ತೊಡಗಿರುವ ಯುವಕರು
ಕೊಂಡಜ್ಜಿಯಲ್ಲಿ ನಡೆದ ಕೆಸರುಗದ್ದೆ ಕ್ರೀಡೆಯಲ್ಲಿ ಹಗ್ಗಜಗ್ಗಾಟದಲ್ಲಿ ತೊಡಗಿರುವ ಯುವಕರು   

ದಾವಣಗೆರೆ: ಫೋಟೊಗ್ರಾಫರ್ಸ್‌ ಯೂತ್ ವೆಲ್‌ಫೇರ್ ಅಸೋಸಿಯೇಷನ್‌ ಹಾಗೂ ದಾವಣಗೆರೆ ಪ್ರೆಸ್‌ಕ್ಲಬ್ ವತಿಯಿಂದ ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಅಂಗವಾಗಿ ಕೊಂಡಜ್ಜಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೆಸರು ಗದ್ದೆ ಕ್ರೀಡೆಗಳಲ್ಲಿ ಯುವಜನರು ಸಂಭ್ರಮದಿಂದ ಪಾಲ್ಗೊಂಡರು.

ಹಗ್ಗ–ಜಗ್ಗಾಟ, ನೂರು ಮೀಟರ್ ಓಟ, ಲಿಂಬು ಸ್ಪೂನ್, ಕಬಡ್ಡಿ, ಮಕ್ಕಳಿಗೆ ವಿವಿಧ ರಂಜನೀಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ಕೆ. ಏಕಾಂತಪ್ಪ ಚಾಲನೆ ನೀಡಿದರು. ಫೋಟೊಗ್ರಾಫ‌ರ್ಸ್‌ ಯೂತ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಎಚ್.ಕೆ.ಸಿ. ರಾಜು, ಯೋಗ ಒಕ್ಕೂಟದಅಧ್ಯಕ್ಷ ವಾಸುದೇವ
ರಾಯ್ಕ‌ರ್‌, ಛಾಯಾಗ್ರಾಹಕರ ಸಹಕಾರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಫೋಟೋಗ್ರಾಫ‌ರ್ಸ್‌ ಮತ್ತು ವಿಡಿಯೊಗ್ರಾಫರ್ಸ್‌ ಸಂಘದ ಅಧ್ಯಕ್ಷ ವಿಜಯ್ ಜಾಧವ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಂತಪ್ಪ ಕೆ.ಜಿ., ಮಾಜಿ ಅಧ್ಯಕ್ಷ ಗಂಗಾಧರ, ಅಂತರಾಷ್ಟ್ರೀಯ ಯೋಗ ಪಟು ಪರಶುರಾಮ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT