ADVERTISEMENT

ಧ್ವಜ ಹಾರಿಸದವರು ರಾಷ್ಟ್ರ ದ್ರೋಹಿಗಳು: ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 4:02 IST
Last Updated 15 ಆಗಸ್ಟ್ 2022, 4:02 IST
ಜಿ.ಎಂ. ಸಿದ್ದೇಶ್ವರ
ಜಿ.ಎಂ. ಸಿದ್ದೇಶ್ವರ   

ದಾವಣಗೆರೆ: ‘ಸ್ವಾತಂತ್ರ್ಯಅಮೃತ ಮಹೋತ್ಸವದಲ್ಲಿ ದೇಶದಾದ್ಯಂತ ಕೋಟ್ಯಂತರ ಜನರು ಯಾವುದೇ ಪಕ್ಷ ಭೇದವಿಲ್ಲದೆ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಆದರೆ, ಧ್ವಜ ಹಾರಿಸದೇ ತಿರಸ್ಕಾರ ಮಾಡಿದವರು ರಾಷ್ಟ್ರ ದ್ರೋಹಿಗಳಾಗುತ್ತಾರೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಸಾರ್ವಜನಿಕ ಟ್ರ್ಯಾಕ್ಟರ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಯಾವುದೇ ಹಳ್ಳಿಗೆ ಹೋದರೂ ಮನೆಮನೆಗಳಲ್ಲಿ ರಾಷ್ಟ್ರಧ್ವಜ ರಾರಾಜಿಸುತ್ತಿವೆ. ಆ ಮೂಲಕ ರಾಷ್ಟ್ರಪ್ರೇಮಕ್ಕೆ ಎಲ್ಲರೂ ಒಗ್ಗೂಡಿದ್ದಾರೆ. ಪ್ರಧಾನಿ ಮೋದಿಯವರು ಕರೆ ಕೊಟ್ಟಿದ್ದಾರೆ ಎಂದು ತಿರಸ್ಕಾರ ಮಾಡಿದರೆ ದೇಶದ್ರೋಹಿಗಳಾಗುತ್ತಾರೆ. ರಾಷ್ಟ್ರಧ್ವಜವು ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕಮ್ಯುನಿಸ್ಟ್ ಪಕ್ಷಗಳ ಸಂಕೇತವಲ್ಲ. ರಾಷ್ಟ್ರದ ಸಂಕೇತ. ಆದ್ದರಿಂದ ಪ್ರತಿಯೊಬ್ಬರೂ ಅದನ್ನು ಗೌರವಿಸಬೇಕು. ಸೋಮವಾರ ಸಾಯಂಕಾಲದೊಳಗೆ ಬಾವುಟವನ್ನು ಇಳಿಸಿ ಸಂರಕ್ಷಿಸಿ ಇಡಬೇಕು. ಎಲ್ಲೆಂದರಲ್ಲಿ ಬಿಸಾಡಬಾರದು. ಅದು ದ್ರೋಹವಾಗುತ್ತದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.