ADVERTISEMENT

ದಸರಾ ಮಹೋತ್ಸವ: ದುರ್ಗಾ ಮಾತೆ ಮೂರ್ತಿ ಪ್ರತಿಷ್ಠಾಪಿಸಿ ಕುಂಕುಮಾರ್ಚನೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:49 IST
Last Updated 22 ಸೆಪ್ಟೆಂಬರ್ 2025, 5:49 IST
ದುರ್ಗಾಮಾತೆ 
ದುರ್ಗಾಮಾತೆ    

ಹರಿಹರ: ದಸರಾ ಮಹೋತ್ಸವ ಸಮಿತಿಯಿಂದ ನಗರದ ನಡುವಲ ಪೇಟೆ ನಾಮದೇವ ಸಿಂಪಿ ಕಲ್ಯಾಣ ಮಂಟಪದಲ್ಲಿ 22ನೇ ವರ್ಷದ ಸಾಮೂಹಿಕ ದಸರಾ ಮತ್ತು ಬನ್ನಿ ಮುಡಿಯುವ ಕಾರ್ಯಕ್ರಮದ ಅಂಗವಾಗಿ ಸೆ. 22ರಿಂದ ಅ. 2ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸೆ. 22ರಂದು ಸಂಜೆ 5ಕ್ಕೆ ದುರ್ಗಾ ಮಾತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶ್ರೀ ಲಲಿತಾ ಅಷ್ಟೋತ್ತರ ಕುಂಕುಮಾರ್ಚನೆ ಮಾಡಲಾಗುವುದು.

ಸೆ. 23ರ ಸಂಜೆ 5ಕ್ಕೆ ಅಷ್ಟೋತ್ತರ ಕುಂಕುಮಾರ್ಚನೆ, 24ರ ಬೆಳಿಗ್ಗೆ 10.30ಕ್ಕೆ ಶ್ರೀ ಆದಿ ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿ ಪಠಣ, ಸೆ. 25 ಮತ್ತು ಸೆ.26ರ ಸಂಜೆ 6.30ಕ್ಕೆ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಸೆ .27ರ ಸಂಜೆ 6.30ಕ್ಕೆ ‘ವಿವಿಧತೆ, ಏಕತೆ, ಭಾವೈಕ್ಯತೆ’ ರೂಪಕ ಪ್ರದರ್ಶನ, ಸೆ. 28ರ ಸಂಜೆ 6.30ಕ್ಕೆ ಆನಂದ ಬಜಾರ್ ಸವಿರುಚಿಯ ಆಹಾರ ಮೇಳ, ಸೆ.29ರ ಬೆಳಿಗ್ಗೆ 9ಕ್ಕೆ ಅಕ್ಷರಾಭ್ಯಾಸ, ಸಂಜೆ 6.30ಕ್ಕೆ ಭರತನಾಟ್ಯ, ಸೆ.30ರ ಬೆಳಿಗ್ಗೆ 9.30ಕ್ಕೆ ದುರ್ಗಾಹೋಮ, ಅ.1ರ ಸಂಜೆ 6.30ಕ್ಕೆ ಅಷ್ಟೋತ್ತರ ಕುಂಕುಮಾರ್ಚನೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಸಮಿತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಶಂಕರ್ ಖಟಾವಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.