ADVERTISEMENT

ಜಿಹಾದಿ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿ

ಶಾಸಕ ಅರವಿಂದ್ ಬೆಲ್ಲದ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಮೇ 2024, 7:04 IST
Last Updated 2 ಮೇ 2024, 7:04 IST
ಅರವಿಂದ್ ಬೆಲ್ಲದ್
ಅರವಿಂದ್ ಬೆಲ್ಲದ್   

ದಾವಣಗೆರೆ: ‘ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ನಡೆದಿರುವ ಜಿಹಾದಿ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಶಾಸಕ ಅರವಿಂದ್ ಬೆಲ್ಲದ್ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ನೇಹಾ ಹತ್ಯೆ ಕೊಲೆ ಮಾಡಿರುವುದನ್ನು ನೋಡಿದರೆ ಜಿಹಾದಿ ಮನಸ್ಥಿತಿ ಹೊಂದಿರುವರಿಂದಲೇ ಇದು ಸಾಧ್ಯ ಹಿಂದೂ ಯುವತಿಯರ ಜೊತೆ ಪೋಟೋ ತೆಗೆಸಿಕೊಂಡು ಬ್ಲಾಕ್ ಮೇಲ್ ಮಾಡುವುದು ಮತಾಂತರ ಆಗುವಂತೆ ಹೆದರಿಸುವುದು ಒಪ್ಪದೇ ಇದ್ದಾಗ ಕೊಲೆ‌ ಮಾಡುವುದು ಈ ರೀತಿ ಕೊಲೆ ಮಾಡುವ ಜಿಹಾದಿಗಳಿಗೆ ಟ್ರೈನಿಂಗ್ ಕೊಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ನೇಹಾ ಹತ್ಯೆಯ ಪ್ರಕರಣವನ್ನು ಸಿಒಡಿಗೆ ಒಪ್ಪಿಸಿದ್ದು, ಸಿಒಡಿ ಮೇಲೆ ನಮಗೆ ನಂಬಿಕೆ ಇಲ್ಲ. ಪೊಲೀಸ್ ಇಲಾಖೆಯಲ್ಲಿ ಬೇಡವಾದವರನ್ನು ಸಿಒಡಿಗೆ ಹಾಕಿರುತ್ತಾರೆ. ಅಂತವರು ತನಿಖೆ ಮಾಡೋದನ್ನು ನಾವು ಒಪ್ಪುವುದಿಲ್ಲ. ನ್ಯಾಯವನ್ನು ನಿರೀಕ್ಷೆ ಮಾಡೋದಿಲ್ಲ. ಸಿಬಿಐ ಸೇರಿದಂತೆ ವಿವಿಧ ಅತ್ಯುನ್ನತ ತನಿಖಾ ಸಂಸ್ಥೆಗಳಿಗೆ ನೀಡಲಿ’ ಎಂದರು.

ADVERTISEMENT

‘ಮುಸ್ಲಿಮರು ಏನು ಮಾಡಿದ್ರು ಅದನ್ನು ಮಾಫಿ ಮಾಡ್ತಾರೆ. ರಾಮ‌ನಗರ ಶಾಸಕ ಮುಸ್ಲಿಂ ಅಲ್ವಾ ಅದು ಕೂಡ ಮಾಫಿ ಮಾಡ್ತಾರೆ. ಇಷ್ಟಾದರೂ ಏಕೆ ಅವರ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಸಿದ್ದರಾಮಯ್ಯ ಅವರಿಗೆ ಗಂಡಸ್ಥನ ಇದ್ದಾರೆ ಕ್ರಮ ತೆಗೆದುಕೊಳ್ಳಲಿ’ ಎಂದು ಹೇಳಿದರು.

‘ಪ್ರಜ್ವಲ್ ಪ್ರಕರಣದಲ್ಲಿ ಬಿಜೆಪಿ, ಕಾಂಗ್ರೆಸ್ ಎಂದು ಬರುವುದಿಲ್ಲ. ಇದು ಮಹಿಳೆಯರ ಮರ್ಯಾದೆ ಪ್ರಶ್ನೆ, ಸ್ವತಃ ಅಮಿತ್ ಶಾ ಅವರೇ ತನಿಖೆ ನಡೆಸುವಂತೆ ಹೇಳಿದ್ದಾರೆ. ಏಕೆ ತನಿಖೆ ವಿಳಂಬ ಮಾಡಿದ್ಸಾರೆ ಎಂದು ಜನರಿಗೆ ಉತ್ತರ ಕೊಡಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.