ADVERTISEMENT

ಬಸವಾಪಟ್ಟಣ: ನೆಲಕ್ಕುರುಳಿದ ವಿದ್ಯುತ್ ಕಂಬ, ಮರ

​ಪ್ರಜಾವಾಣಿ ವಾರ್ತೆ
Published 13 ಮೇ 2024, 4:49 IST
Last Updated 13 ಮೇ 2024, 4:49 IST
ಬಸವಾಪಟ್ಟಣ ಸಮೀಪದ ಶ್ರೀರಾಮನಗರದಲ್ಲಿ ಭಾನುವಾರ ಸಂಜೆ ಬೀಸಿದ ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿರುವುದು
ಬಸವಾಪಟ್ಟಣ ಸಮೀಪದ ಶ್ರೀರಾಮನಗರದಲ್ಲಿ ಭಾನುವಾರ ಸಂಜೆ ಬೀಸಿದ ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿರುವುದು   

ಬಸವಾಪಟ್ಟಣ: ಸಮೀಪದ ಶ್ರೀರಾಮನಗರದಲ್ಲಿ ಭಾನುವಾರ ಬೀಸಿದ ಭಾರಿ ಬಿರುಗಾಳಿ ಮಳೆಗೆ ಒಂಬತ್ತು ವಿದ್ಯುತ್‌ ಕಂಬ ಮತ್ತು ಹಲವು ಮರಗಳು ನೆಲಕ್ಕುರುಳಿವೆ.

ಸಂಜೆಯಿಂದ ಗ್ರಾಮದಲ್ಲಿ ಭಾರಿ ಗಾಳಿ ಬೀಸಲಾರಂಭಿಸಿತ್ತು. ಗಾಳಿಯ ವೇಗ ಹೆಚ್ಚಾಗುತ್ತಿದ್ದಂತೆ ಮರ ಹಾಗೂ ಕಂಬಗಳು ನೆಲಕ್ಕೆ ಬಿದ್ದವು. ವಿದ್ಯುತ್‌ ತಂತಿಗಳು ನೆಲಕ್ಕೆ ಬಿದ್ದಿದ್ದರಿಂದ ಗ್ರಾಮಸ್ಥರು ರಸ್ತೆಗಳಲ್ಲಿ ಓಡಾಡಲು ಪರದಾಡಿದರು.

ತಕ್ಷಣವೇ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದರಿಂದ ಯಾರಿಗೂ ಅಪಾಯವಾಗಿಲ್ಲ. ಬೆಸ್ಕಾಂ ಅಧಿಕಾರಿಗಳಿಗೆ ಗಮನಕ್ಕೆ ತರಲಾಗಿದ್ದು, ಸೋಮವಾರ ದುರಸ್ತಿ ನಡೆಸಿ, ವಿದ್ಯುತ್‌ ಸಂಪರ್ಕ ನೀಡುವುದಾಗಿ ತಿಳಿಸಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.