ADVERTISEMENT

ಚುನಾವಣಾ ಕರ್ತವ್ಯ ಲೋಪ: ಇಬ್ಬರು ಅಧಿಕಾರಿಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 7:32 IST
Last Updated 21 ಏಪ್ರಿಲ್ 2019, 7:32 IST
   

ದಾವಣಗೆರೆ: ಲೋಕಸಭಾ ಚುನಾವಣೆಯ ಅಂಚೆ ಮತಪತ್ರ ಹಾಗೂ ಇ.ಡಿ.ಸಿಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಜಿಲ್ಲಾ ಚುನಾವಣಾಧಿಕಾರಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ದಾವಣಗೆರೆ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರ ಹಾಗೂ ಇ.ಡಿ.ಸಿಗೆ ಸಂಬಂಧಿಸಿದಂತೆ ನೇಮಿಸಿದ್ದ ಪಾಲಿಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಂ.ಆರ್. ಗಿರಡ್ಡಿ ಹಾಗೂ ಸಹಾಯಕ ಕಂದಾಯ ಅಧಿಕಾರಿ ವಿ. ಜಗನ್ನಾಥರಾವ್‌ ಅಮಾನತುಗೊಂಡವರು.

ಏಪ್ರಿಲ್‌ 19ರಂದು ಜಿಲ್ಲಾಧಿಕಾರಿಯು ಸಹಾಯಕ ಚುನಾವಣಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹಾಗೂ ಅಂಚೆ ಮತಪತ್ರ ಮತ್ತು ಇಡಿಸಿ ಜಿಲ್ಲಾ ನೋಡಲ್‌ ಅಧಿಕಾರಿ ಜೊತೆಗೆ ಪಾಲಿಕೆಗೆ ಭೇಟಿ ನೀಡಿದಾಗ ಅಂಚೆ ಮತಪತ್ರ ಹಾಗೂ ಚುನಾವಣಾ ಕಾರ್ಯನಿರತ ಅಧಿಕಾರಿ ಮತ್ತು ಸಿಬ್ಬಂದಿ ಅಂಚೆ ಮತಪತ್ರಗಳನ್ನು ಹಾಕಲು ಕಚೇರಿ ಸಿಬ್ಬಂದಿ ಇಲ್ಲದಿರುವುದು ಕಂಡು ಬಂದಿದೆ. ಚುನಾವಣಾ ಕಾರ್ಯನಿರತ ಸಿಬ್ಬಂದಿಗಳ 923 ಇ.ಡಿ.ಸಿ ಅರ್ಜಿಗಳು ಬಾಕಿ ಇರುವುದು ಗಮನಕ್ಕೆ ಬಂದಿದೆ. ಪೊಲೀಸ್ ಹಾಗೂ ವಾಹನ ಚಾಲಕರ 397 ಇ.ಡಿ.ಸಿ ಅರ್ಜಿಗಳೂ ಪತ್ತೆಯಾಗಿಲ್ಲ. ಈ ಬಗ್ಗೆ ಅಂಚೆ ಮತಪತ್ರ ಹಾಗೂ ಇ.ಡಿ.ಸಿಯ ನೋಡಲ್ ಅಧಿಕಾರಿಗಳನ್ನು ವಿಚಾರಿಸಿದಾಗ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಹೀಗಾಗಿ ಈ ಅಧಿಕಾರಿಗಳನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ಆದೇಶಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.