
ಪ್ರಜಾವಾಣಿ ವಾರ್ತೆಪ್ರಾತಿನಿಧಿಕ ಚಿತ್ರ
ತ್ಯಾವಣಿಗೆ: ಸಮೀಪದ ಕಬ್ಬಳ ಗ್ರಾಮದಲ್ಲಿ ಮನೆಯ ಮುಂದೆ ಟ್ರ್ಯಾಕ್ಟರ್ ನಿಲ್ಲಿಸುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ಸಂಭವಿಸಿದೆ.
‘ನಮ್ಮ ಮನೆಯ ಗೇಟ್ ಮುಂದೆ ಟ್ರ್ಯಾಕ್ಟರ್ ನಿಲ್ಲಿಸಿದ್ದನ್ನು ಪ್ರಶ್ನಿಸಿದಕ್ಕೆ ಅದರ ಮಾಲೀಕ ಚಂದನ್ ಹಾಗೂ ಅವರ ಸಂಬಂಧಿಕರಾದ ಪಾಂಡುರಂಗಪ್ಪ, ನಾಗರತ್ನಮ್ಮ, ಮೇಘನಾ, ಸೋನಾಲಿಕಾ ಸೇರಿದಂತೆ ಏಳು ಮಂದಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಗ್ರಾಮದ ನಿವಾಸಿ ವೀಣಾ ದೂರಿದ್ದಾರೆ.
‘ಜಗಳ ಬಿಡಿಸಲು ಬಂದ ನನ್ನ ಅತ್ತೆ ನಿರ್ಮಲಾ ಬಾಯಿ ಅವರ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ದೊಣ್ಣೆ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆ ₹1 ಲಕ್ಷ ಮೌಲ್ಯದ ಚಿನ್ನದ ಸರ ಕಳುವಾಗಿದೆ’ ಎಂದು ದೂರು ನೀಡಿದ್ದಾರೆ.
ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.