ADVERTISEMENT

ಕಾವೇರಿ- 2.0: ಲೋಪ ಸರಿಪಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 15:38 IST
Last Updated 12 ಜುಲೈ 2023, 15:38 IST
ಹೊನ್ನಾಳಿ ಉಪ ನೋಂದಣಾಧಿಕಾರಿಗಳಿಗೆ ಕಾವೇರಿ–2.0 ತತ್ರಾಂಶದಲ್ಲಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಪತ್ರ ಬರಹಗಾರರು ಮನವಿ ಸಲ್ಲಿಸಿದರು. 
ಹೊನ್ನಾಳಿ ಉಪ ನೋಂದಣಾಧಿಕಾರಿಗಳಿಗೆ ಕಾವೇರಿ–2.0 ತತ್ರಾಂಶದಲ್ಲಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಪತ್ರ ಬರಹಗಾರರು ಮನವಿ ಸಲ್ಲಿಸಿದರು.    

ಹೊನ್ನಾಳಿ: ಕಾವೇರಿ –2.0 ತಂತ್ರಾಂಶದಲ್ಲಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ  ಪತ್ರ ಬರಹಗಾರರು ಮಂಗಳವಾರ ಉಪನೊಂದಣಾಧಿಕಾರಿ ಪ್ರಭಾಕರ್ ಮಠದ್ ಅವರಿಗೆ ಮನವಿ ಸಲ್ಲಿಸಿದರು.

ಹೊಸದಾಗಿ ಅಳವಡಿಸಿರುವ ಕಾವೇರಿ –2.0 ತತ್ರಾಂಶದಲ್ಲಿ ಅನೇಕ ಲೋಪಗಳಿವೆ. ನೋಂದಣಿ ಆಗುವ ಮುಂಚೆ ಹಾಗೂ ಆದ ನಂತರ ಹಲವಾರು ಬಾರಿ ಉಪನೋಂದಣಿ ಕಚೇರಿಗೆ ಸಾರ್ವಜನಿಕರು ಅಲೆದಾಡಬೇಕಾದ ಪರಿಸ್ಥಿತಿ ಬಂದಿದೆ. ಪ್ರತಿದಿನ ನೊಂದಣಿ ಬಹಳ ವಿಳಂಬವಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದಿಂದ ಬರುವ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಇದನ್ನು ಕೂಡಲೇ ಸರಿಪಡಿಸಿ ಎಂದು ಮನವಿ ಮಾಡಿದರು.

ಪತ್ರ ಬರಹಗಾರರಾದ ಸುರೇಶ್, ಕರಿಬಸಪ್ಪ, ಶಂಕರ್ ಕುಮಾರ್, ಶಿವಮೂರ್ತಿ, ತೋಟಪ್ಪ, ಉಮೇಶ್, ಪ್ರಕಾಶ್, ಮೈಲಪ್ಪ, ಕುಮಾರ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.