ADVERTISEMENT

‘ವಂದೇ ಮಾತರಂ’ 150ನೇ ಸಂಭ್ರಮಾಚರಣೆ: 18ಕ್ಕೆ ಬಹಿರಂಗ ಸಭೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 5:33 IST
Last Updated 16 ಜನವರಿ 2026, 5:33 IST
ಡಾ.ಆರ್.ಆರ್.ಖಮಿತ್ಕರ್
ಡಾ.ಆರ್.ಆರ್.ಖಮಿತ್ಕರ್   


ಹರಿಹರ: ದೇಶದ ಸ್ವಾತಂತ್ರö್ಯ ಹೋರಾಟಕ್ಕೆ ಪ್ರೇರಣೆ ನೀಡಿದ ‘ವಂದೇ ಮಾತರಂ’ ಗೀತೆ ರಚನೆಯ 150ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ, ಜ. 18ರಂದು ಸಂಜೆ 4.30ಕ್ಕೆ ನಗರದ ಗಾಂಧಿ ಮೈದಾನದಲ್ಲಿ "ಒಂದು ಕಥೆ ಒಂದು ವ್ಯಥೆ" ಶೀರ್ಷಿಕೆಯಡಿ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ಸನಾತನ ಸಿಂಧು ಸಂಸ್ಥೆಯ ಅಧ್ಯಕ್ಷ ಡಾ.ಆರ್.ಆರ್.ಖಮಿತ್ಕರ್ ಹೇಳಿದರು.
ಬಹಿರಂಗ ಸಭೆಯಲ್ಲಿ ಖ್ಯಾತ ಉಪನ್ಯಾಸಕ ಚಕ್ರವರ್ತಿ ಸೂಲಿಬೆಲೆ ಪ್ರದಾನ ಭಾಷಣ ಮಾಡುವರು. ಇದೇ ಸಂದರ್ಭದಲ್ಲಿ 150 ಮಹಿಳೆಯರಿಂದ ವಂದೇ ಮಾತರಂ ಗೀತೆಯ ಸಾಮೂಹಿಕ ಪಠಣ ನಡೆಯಲಿದೆ. ಸಾರ್ವಜನಿಕರು ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಕೋರಿದರು.
ಬ್ರಿಟಿಷರ ಕಪಿಮುಷ್ಟಿಯಿಂದ ತಾಯಿ ಭಾರತಿಯನ್ನು ಮುಕ್ತಗೊಳಿಸುವ ಉತ್ಕಟ ಅಪೇಕ್ಷೆಯಿಂದ, ಸಾವಿರಾರು ಸ್ವಾತಂತ್ರ‍್ಯ ಹೋರಾಟಗಾರರು ‘ವಂದೇ ಮಾತರಂ’ ಘೋಷಣೆಯೊಂದಿಗೆ ನಸುನಗುತ್ತ ನೇಣುಗಂಬವನ್ನೇರಿದ ಇತಿಹಾಸ, ದೇಶದ ಹೆಮ್ಮೆಯ ಅಧ್ಯಾಯವಾಗಿದೆ. ಅಮರ ಹುತಾತ್ಮರ ತ್ಯಾಗ–ಬಲಿದಾನದ ಸ್ಮರಣೆಯೊಂದಿಗೆ ಈ ಸಂಭ್ರಮಾಚರಣೆ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ವೀರಣ್ಣ ಯಾದವಾಡ ಹೇಳಿದರು.
ಸಂಸ್ಥೆಯ ಪದಾಧಿಕಾರಿಗಳಾದ ಪ್ರಕಾಶ್ ಕೊಳೂರ್, ಶಿವಪ್ರಕಾಶ್ ಶಾಸ್ತ್ರಿ, ವಕೀಲ ವೀರೇಶ್ ಅಜ್ಜಣ್ಣನವರ್, ಆರ್.ಆರ್.ಕಾಂತರಾಜ್, ಶ್ರೀಧರ್ ಶೆಟ್ಟಿ, ಜಿ.ಕೆ.ಮಲ್ಲಿಕಾರ್ಜುನ, ಪ್ರಕಾಶ್ ನೆಲ್ಲೂರು, ರವಿ ಸಿಂಗ್ ಇದ್ದರು.
...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.