ADVERTISEMENT

ಸಾಸ್ವೆಹಳ್ಳಿ: ಸಂಭ್ರಮದ ವಿಜಯದಶಮಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 6:19 IST
Last Updated 6 ಅಕ್ಟೋಬರ್ 2022, 6:19 IST
ಸಾಸ್ವೆಹಳ್ಳಿ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ದೇವರ ಉತ್ಸವ ಮೂರ್ತಿಗಳೊಂದಿಗೆ ಬನ್ನಿ ಮುಡಿಯಲು ತೆರಳುತ್ತಿರುವ ಗ್ರಾಮಸ್ಥರು
ಸಾಸ್ವೆಹಳ್ಳಿ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ದೇವರ ಉತ್ಸವ ಮೂರ್ತಿಗಳೊಂದಿಗೆ ಬನ್ನಿ ಮುಡಿಯಲು ತೆರಳುತ್ತಿರುವ ಗ್ರಾಮಸ್ಥರು   

ಸಾಸ್ವೆಹಳ್ಳಿ: ಹೋಬಳಿಯ ಹನುಮನಹಳ್ಳಿ, ಸಾಸ್ವೆಹಳ್ಳಿ, ಐನೂರು, ಕಮ್ಮಾರಗಟ್ಟೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಗ್ರಾಮ ದೇವರಿಗೆ ವಿಶೇಷ ಪೂಜೆ ಮಾಡಿ ವಿಜಯದಶಮಿ ಆಚರಿಸಲಾಯಿತು.

ಗ್ರಾಮಸ್ಥರು ಊರ ಹೊರವಲಯದಲ್ಲಿರುವ ಬನ್ನಿ ಮರದಲ್ಲಿ ಉತ್ಸವ ಮೂರ್ತಿಗಳೊಂದಿಗೆ ತೆರಳಿ ಬನ್ನಿ ಮುಡಿದರು.

ರಾಂಪುರದಲ್ಲಿ ದುರ್ಗಾದೇವಿ ಹಾಗೂ ವೆಂಕಟೇಶ್ವರ ಸ್ವಾಮಿಯ ಬನ್ನಿ ಮುಡಿಯುವ ಮುನ್ನ ಉತ್ಸವ ಮೂರ್ತಿಗಳೊಂದಿಗೆ ತುಂಗಭದ್ರಾ ನದಿಗೆ ತೆರಳಿ ಗಂಗಾ ಪೊಜೆ ನೆರವೇರಿಸಲಾಯಿತು.

ADVERTISEMENT

ಒಂಬತ್ತು ದಿನಗಳ ಕಾಲ ಗ್ರಾಮದ ಮಹಿಳೆಯರು, ನವ ದುರ್ಗೆಯರ ವೃತಾಚರಣೆ ಕೈಗೊಂಡು ಮಡಿಯೊಂದಿಗೆ ಅಮ್ಮನ ಗುಡಿಗೆ ಹಾಗೂ ಬನ್ನಿ ಮರಕ್ಕೆ ತೆರಳಿ ಪೂಜೆಯನ್ನು ನೆರವೇರಿಸಿದರು.

ಕಿರಿಯರು ಬನ್ನಿ ಪತ್ರೆಯನ್ನು ಹಿರಿಯರಿಗೆ ನೀಡಿ ಆಶೀರ್ವಾದ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.