ADVERTISEMENT

ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಆರೋಪ ಸುಳ್ಳು: ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 19:45 IST
Last Updated 21 ಫೆಬ್ರುವರಿ 2020, 19:45 IST
ಬಿ.ವೈ.ರಾಘವೇಂದ್ರ
ಬಿ.ವೈ.ರಾಘವೇಂದ್ರ   

ದಾವಣಗೆರೆ: ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪ ನೂರಕ್ಕೆ ಸೂರು ಸುಳ್ಳು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಜಯೇಂದ್ರ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅವರು ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ.ಅವರು ಸಿಎಂ ಮಗ ಎಂದು ಕೆಲವರಿಗೆ ಕೆಲಸ ಮಾಡಿಸಿಕೊಟ್ಟಿರಬಹುದು.ಹಾಗೆಂದು ಎಲ್ಲಾ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದಾರೆಂದರೆ ಎಂಬುದು ಸುಳ್ಳು.ನಾನು ಜಿಲ್ಲಾ ಮಟ್ಟದಲ್ಲಿ ಹೆಸರು ಮಾಡಿದ್ದೆನೆ ವಿಜಯೇಂದ್ರ ರಾಜಧಾನಿಯಲ್ಲಿರುತ್ತಾರೆ.ಹಾಗಾಗಿ ಅವರು ಎಲ್ಲರ ಕಣ್ಣಿಗೂ ಬೀಳುತ್ತಾರೆ. ನನಗಿಂತ ಚಿಕ್ಕವರಾದರೂ ಬಿಜೆಪಿಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ’ ಎಂದರು.

ದೇಶ ವಿರೋಧಿ ಚಟುವಟಿಕೆಗಳು ದೇಶದಲ್ಲಿ ಹೆಚ್ಚಾಗಿ ಕಾಣಿಸುತ್ತಿವೆ.ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಅಮೂಲ್ಯಳಿಗೆ ಯಾರಿಂದಲೋ ಪ್ರೇರಣೆ ಇದೆ.ಸಣ್ಣ ವಯಸ್ಸಿನಲ್ಲಿ ಈ ರೀತಿ ಮಾತಾಡಿದ್ದಾರೆ ಅಂದ್ರೆ ಯಾರೋ ಬಾಹ್ಯ ವ್ಯಕ್ತಿಗಳ ಕೆಲಸವಿದೆ.ಸರ್ಕಾರ ಇಂತಹ ವಿಚಾರಗಳಲ್ಲಿ ಕಠಿಣವಾದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.