ADVERTISEMENT

ನಾನು ಸತ್ತರೂ ಕರ್ನಾಟಕಕ್ಕೆ ಶವ ಬರೊಲ್ಲ: ಸಂಸದ ಜಿ.ಎಂ.ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 16:26 IST
Last Updated 10 ನವೆಂಬರ್ 2020, 16:26 IST
 ಜಿ.ಎಂ.ಸಿದ್ದೇಶ್ವರ
 ಜಿ.ಎಂ.ಸಿದ್ದೇಶ್ವರ   

ದಾವಣಗೆರೆ: ‘ಸಚಿವ ಸುರೇಶ ಅಂಗಡಿ ನಿಧನದ ಬಳಿಕ ನಾನು ದೆಹಲಿಗೆ ಹೋಗಿಯೇ ಇಲ್ಲ. ನಾಳೆ ನಾನು ಸತ್ತರೂ‌ ನನ್ನ ಶವ ಕರ್ನಾಟಕಕ್ಕೆ ಬರಲ್ಲ’ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಯ ಬಳಿ ಮಾತನಾಡಿದ ಅವರು, ‘ಸುರೇಶ್ ಅಂಗಡಿ ಮೃತರಾದ ಬಳಿಕ ನಾನು ನವದೆಹಲಿಗೆ ಹೋಗಿಲ್ಲ. ಏಕೆಂದರೆ ಕೋವಿಡ್ ಬಂದು ನಾನು ಮೃತಪಟ್ಟರೆ ನನ್ನ ಶವ ಮತ್ತೆ ಕರ್ನಾಟಕಕ್ಕೆ ಬರೋಲ್ಲ. ಈ ಕಾರಣಕ್ಕೆ ಎಷ್ಟೇ ಸಭೆ ಇದ್ದರೂ ನಾನು ಹೋಗಿಲ್ಲ’ ಎಂದರು.

‘ಕೋವಿಡ್ ಬಗ್ಗೆ ಉದಾಸೀನ ಮಾಡಿ ಸಂಸದ ಸುರೇಶ್ ಅಂಗಡಿ ಸಾವನ್ನಪ್ಪಿದರು. ಚಳಿಗಾಲದಲ್ಲಿ ಎರಡನೇ ಹಂತದ ಕೋವಿಡ್ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಸುರೇಶ್ ಅಂಗಡಿ ಅವರ ಪಾರ್ಥೀವ ಶರೀರವನ್ನು ಕರ್ನಾಟಕದ ತವರಿಗೆ ತರಬೇಕೆಂದು ಬಹಳಷ್ಟು ಶ್ರಮಪಟ್ಟೆವು. ಆದರೆ ಆಗಲಿಲ್ಲ. ಕೋವಿಡ್ ನಿಯಮದಂತೆ ಅಲ್ಲೇ ಶವಸಂಸ್ಕಾರ ಮಾಡಲಾಯಿತು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.