ADVERTISEMENT

ಸೇವಾಲಾಲ್ ದರ್ಶನಕ್ಕಷ್ಟೇ ಅವಕಾಶ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 5:03 IST
Last Updated 14 ಫೆಬ್ರುವರಿ 2022, 5:03 IST
ಸಂತ ಸೇವಾಲಾಲ್ ಜಯಂತಿ ರದ್ದುಗೊಂಡಿರುವುದರಿಂದ ನ್ಯಾಮತಿ ತಾಲ್ಲೂಕು ಭಾಯಾಗಡ್‌ನಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿರುವುದು. ನ್ಯಾಮತಿ ಪಿಎಸ್‌ಐ ಪಿ.ಎಸ್. ರಮೇಶ, ತಾಂಡಾ ಅಭಿವೃದ್ಧಿ ನಿಗಮ ನಿರ್ದೇಶಕ ಮಾರುತಿನಾಯ್ಕ ಇದ್ದಾರೆ.
ಸಂತ ಸೇವಾಲಾಲ್ ಜಯಂತಿ ರದ್ದುಗೊಂಡಿರುವುದರಿಂದ ನ್ಯಾಮತಿ ತಾಲ್ಲೂಕು ಭಾಯಾಗಡ್‌ನಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿರುವುದು. ನ್ಯಾಮತಿ ಪಿಎಸ್‌ಐ ಪಿ.ಎಸ್. ರಮೇಶ, ತಾಂಡಾ ಅಭಿವೃದ್ಧಿ ನಿಗಮ ನಿರ್ದೇಶಕ ಮಾರುತಿನಾಯ್ಕ ಇದ್ದಾರೆ.   

ಭಾಯಾಗಡ್(ನ್ಯಾಮತಿ): ತಾಲ್ಲೂಕು ಸಂತ ಸೇವಾಲಾಲ್ ಅವರ 283ನೇ ಜಯಂತಿಯನ್ನು ಜಿಲ್ಲಾಡಳಿತ ಮತ್ತು ಮಹಾಮಠ ಸಮಿತಿಯವರು ಕೋವಿಡ್ ಕಾರಣದಿಂದ ರದ್ದುಪಡಿಸಿದ್ದು, ಸೇವಾಲಾಲ್ ಮತ್ತು ಮರಿಯಮ್ಮ ದೇವಿಯ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್‌ ಟಿ.ವಿ. ದೇವರಾಜು ತಿಳಿಸಿದರು.

‘ಫೆ. 13ರಿಂದ ಜಯಂತಿ ಆರಂಭವಾಗಿದ್ದು. ಆಚರಣೆ ರದ್ದುಪಡಿಸಿರುವ ಬಗ್ಗೆ ಸಾಕಷ್ಟು ಪ್ರಚಾರಪಡಿಸಿದರೂ, ಮಾಲಾಧಾರಿಗಳು, ಭಕ್ತರು ಬರುತ್ತಿದ್ದಾರೆ. ಅವರಿಗೆ ದೇವರ ದರ್ಶನ ಹೊರತುಪಡಿಸಿ, ಕ್ಷೇತ್ರದಲ್ಲಿ ಉಳಿಯುವುದಕ್ಕೆ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಆಯ್ದ ಜಾಗದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸ್ ಇಲಾಖೆಯಿಂದ ಮಾಹಿತಿ ನೀಡಲಾಗುತ್ತಿದೆ. ಭಕ್ತರು ಮತ್ತು ಮಾಲಾಧಾರಿಗಳು
ಕೋವಿಡ್‌ ನಿಯಮಗಳನ್ನು ಪಾಲಿಸಿ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT