ADVERTISEMENT

ಆಧ್ಯಾತ್ಮಿಕ ಸಾಂಸ್ಕೃತಿಕ ಉತ್ಸವ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 6:40 IST
Last Updated 18 ಫೆಬ್ರುವರಿ 2012, 6:40 IST

ಧಾರವಾಡ: `ಈಶ್ವರೀಯ ವಿಶ್ವವಿದ್ಯಾಲಯದ ಅಮೃತ ಮಹೋತ್ಸವ ಮತ್ತು ಮಹಾಶಿವರಾತ್ರಿಯ ಆಧ್ಯಾತ್ಮಿಕ ಸಾಂಸ್ಕೃತಿಕ ಮಹೋತ್ಸವ ಫೆ. 19 ರಿಂದ 23ರ ವರೆಗೆ ಕಲಾಭವನದ ಕಡಪಾ ಮೈದಾನದಲ್ಲಿ ನಡೆಯಲಿದೆ~ ಎಂದು ಬ್ರಹ್ಮಕುಮಾರಿ ಜಯಂತಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಹೋತ್ಸವದ ಅಂಗವಾಗಿ ಪ್ರತಿದಿನ ಸಂಜೆ 5 ರಿಂದ 10ರ ವರೆಗೆ ಅಮರನಾಥ ದರ್ಶನ ಕಾರ್ಯಕ್ರಮ ನಡೆಯುವುದು. 19 ರಂದು ಸಂಜೆ 5.30ಕ್ಕೆ ಸಚಿವ ಜಗದೀಶ ಶೆಟ್ಟರ ಉದ್ಘಾಟಿಸುವರು. ಮನಗುಂಡಿಯ ಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಬಿ.ವಾಲೀಕಾರ ಅಧ್ಯಕ್ಷತೆ ವಹಿಸುವರು ಎಂದರು.

ಫಾ. ಆ್ಯಂಟನಿ ಜೋಸೆಫ್, ಫಾ. ಪೀಟರ್ ಆಶಿರ್ವಾದ, ಮೌಲಾನಾ ಕಜಿಮ್ ಅಲಿ ಖಾತಿಮ್, ಷಾ ಮೊಹಮ್ಮದ್ ನೂರುದ್ದೀನ್, ಜ್ಞಾನಿ ಸುರೇಂದ್ರ ಸಿಂಗ್ ಉಪಸ್ಥಿತರಿರುವರು. ವಿಶೇಷ ಆಮಂತ್ರಿತರಾಗಿ ಭಾರತಿ ಬಿ.ಎಸ್., ಎಫ್.ಸಿ.ಪಾಟೀಲ, ಅಡಿವೆಪ್ಪ ಮಾಸೂರ, ಶಫಿ ಆಗಮಿಸುವರು ಎಂದು ತಿಳಿಸಿದರು.
ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ 20 ರಂದು ಬೆಳಿಗ್ಗೆ 8ಕ್ಕೆ ಈಶ್ವರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಶಿವ ಧ್ವಜಾರೋಹಣ ನಡೆಯಲಿದೆ.

10.30ಕ್ಕೆ ಪೂರ್ಣಕುಂಭ, ದ್ವಾದಶ ಜ್ಯೋತಿರ್ಲಿಂಗದೊಂದಿಗೆ ನಗರದಲ್ಲಿ ಶಾಂತಿಯಾತ್ರೆ ಸಂಚರಿಸಲಿದೆ. ಸಂಜೆ 5.30ಕ್ಕೆ ಕಲಾಭವನದ ಮೈದಾನದಲ್ಲಿ ಶಿವಯೋಗ ಹಮ್ಮಿಕೊಳ್ಳಲಾಗಿದೆ. 7.30ಕ್ಕೆ ನೃತ್ಯ ಕಲಾ ಸಂಗಮ ನಡೆಯಲಿದೆ ಎಂದರು.

ಪರಮಾತ್ಮ ಅವತರಣೆಯ ಅಮೃತ ಮಹೋತ್ಸವದ ಅಂಗವಾಗಿ 21 ರಂದು ಸಂಜೆ 5.30ಕ್ಕೆ ಮಹಿಳೆಯರಿಂದ ಆಧ್ಯಾತ್ಮಿಕ ಕ್ರಾಂತಿ ಸಮಾಜದಲ್ಲಿ ಶಾಂತಿ ಎಂಬ ವಿಷಯ ಕುರಿತು ಮಹಿಳಾ ಮಹೋತ್ಸವ ನಡೆಯಲಿದೆ. ಮೇಯರ್ ಪೂರ್ಣಾ ಪಾಟೀಲ ಉದ್ಘಾಟಿಸವರು. ಅತಿಥಿಗಳಾಗಿ ಶಾಸಕಿ ಸೀಮಾ ಮಸೂತಿ, ಡಾ. ಪ್ರೀತಾ ಶೆಟ್ಟಿ, ವಾಣಿ ಪ್ರಸಾದ, ಭಾರತಿ ಹೆಗಡೆ, ರೂಪಾ ಹಿರೇಹೊಳಿ, ಶೋಭಾ ಸವದಿ ಆಗಮಿಸುವರು ಎಂದು ಜಯಂತಿ ತಿಳಿಸಿದರು.

22 ರಂದು ಸಂಜೆ 5.30ಕ್ಕೆ ಮೌಲ್ಯಾಧಾರಿತ ಪ್ರತಿಭಾ ಉತ್ಸವ ನಡೆಯಲಿದೆ. ಶಾಲಾ ವಿದ್ಯಾರ್ಥಿಗಳು ಭಾಗವಹಿಸುವರು. 23 ರಂದು ಸಂಜೆ 5.30ಕ್ಕೆ ಸಾಂಸ್ಕೃತಿಕ ಮಹೋತ್ಸವ ನಡೆಯಲಿದೆ. ಮಾಜಿ ಶಾಸಕ ವಿನಯ ಕುಲಕರ್ಣಿ ಕಾರ್ಯಕ್ರಮವನ್ನು ಉದ್ಘಾಟಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.