ಹುಬ್ಬಳ್ಳಿ: ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ರಾಜ್ಯ ಸಮಿತಿಯ ಎರಡನೇ ರಾಜ್ಯಮಟ್ಟದ ಕಾರ್ಮಿಕ ಸಮ್ಮೇಳನ ಇದೇ 25 ಮತ್ತು 26ರಂದು ಬಳ್ಳಾರಿಯಲ್ಲಿ ನಡೆಯಲಿದೆ~ ಎಂದು ಎಐಯುಟಿ ಯುಸಿ ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
`ಕಾರ್ಮಿಕ ವಿರೋಧಿ ಜಾಗತೀಕ ರಣ ನೀತಿಯನ್ನು ಕೈಬಿಡ ಬೇಕು, ಕಾರ್ಮಿಕ ಹಕ್ಕುಗಳನ್ನು ಇನ್ನಷ್ಟು ವಿಸ್ತರಿಸಬೇಕು, ಗುತ್ತಿಗೆ ಪದ್ದತಿ ರದ್ದುಗೊಳಿಸಿ ಖಾಯಂ ಸ್ವರೂಪದ ಕೆಲಸ ನಿರ್ವಹಿಸುತ್ತಿರುವವರನ್ನು ಅದೇ ಹುದ್ದೆಗಳಲ್ಲಿ ವಿಲೀನಗೊಳಿಸ ಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಮುಂತಾದ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಈ ಸಮ್ಮೇಳನ ನಡೆಸಲಾಗುವುದು. ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವಿವಿಧ ವಲಯಗಳಿಗೆ ಸೇರಿದ ಕಾರ್ಮಿಕ ಸಂಘಗಳಿಂದ 500 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ~ ಎಂದರು.
`ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳ ನೀತಿಗಳು ಕಾರ್ಮಿಕ ವಿರುದ್ಧವಾಗಿದೆ. ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಆ ಪಕ್ಷಗಳ ಆಡಳಿತದ ಸರ್ಕಾರಗಳಿಗೆ ಸಮಯವಿಲ್ಲ~ ಎಂದು ದೂರಿದ ಅವರು `ಗಡಿ ಸಂಪತ್ತನ್ನು ರಾಷ್ಟ್ರೀ ಕರಣಗೊಳಿಸಬೇಕು, ಗಣಿ ಕಾರ್ಮಿ ಕರಿಗೆ ಭದ್ರತೆ ಖಚಿತಪಡಿಸಬೇಕು ಎಂದೂ ಸಮ್ಮೇಳನದ ಮೂಲಕ ಒತ್ತಾಯಿಸಲಾಗುವುದು~ ಎಂದರು.
`ಸಮ್ಮೇಳನದ ಬಳಿಕ ವಿವಿಧ ಬೇಡಿಕೆಗಳ ಪ್ರಸ್ತಾವನೆಯೊಂದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಮುಂಬರುವ ದಿನಗಳಲ್ಲಿ ಇನ್ನಷ್ಟು ಪ್ರಬಲ ಹೋರಾಟಗಳನ್ನು ಹಮ್ಮಿ ಕೊಳ್ಳುವ ಬಗ್ಗೆಯೂ ಸಮ್ಮೇಳ ನದಲ್ಲಿ ರೂಪುರೇಷೆ ನೀಡಲಾಗುವುದು ಎಂದರು.
ತೊದಲುವಿಕೆ ನಿವಾರಣಾ ಶಿಬಿರ 19ರಂದು
ಹುಬ್ಬಳ್ಳಿ: ನಗರದ ಧನ್ವಂತರಿ ತೊದಲುವಿಕೆ ನಿವಾರಣಾ ಕೇಂದ್ರದಲ್ಲಿ ಉಚಿತವಾಗಿ ತೊದಲುವಿಕೆ ನಿವಾರಣಾ ಶಿಬಿರವನ್ನು ಇದೇ 19ರಿಂದ 21ರ ವರೆಗೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಯೋಜಿಸಲಾಗಿದೆ.
ತೊದಲುವಿಕೆ, ಉಗ್ಗುವಿಕೆ, ಅಸ್ಪಷ್ಟವಾಗಿ ಇಲ್ಲವೆ ವೇಗವಾಗಿ ಮಾತನಾಡುವ ಸಮಸ್ಯೆ ಉಳ್ಳವರಿಗೆ ಡಾ.ಅಶೋಕ ಬಸವಾ ಉಚಿತವಾಗಿ ತಪಾಸಣೆ ಮಾಡಿ ಸಲಹೆ ನೀಡಲಿ ್ದದಾರೆ. ಯಾವುದೇ ವಯಸ್ಸಿನವರು ಸಲಹೆ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ ಸ್ಟೇಷನ್ ರಸ್ತೆಯಲ್ಲಿಯ ಅಂಕುಶ ಆರ್ಕೆಡ್‌ನಲ್ಲಿಯ ಧನ್ವಂತರಿ ಚಿಕಿತ್ಸಾಲ ಯವನ್ನು ಇಲ್ಲವೆ 9844104701 ಮೊಬೈಲ್ ಫೋನ್ ಸಂಪರ್ಕಿಸ ಬಹುದು.
ಬ್ರಾಹ್ಮಣ ಸಭಾಕ್ಕೆ ನೇಮಕ
ಹುಬ್ಬಳ್ಳಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಟಿ.ಎಚ್. ಕುಲಕರ್ಣಿ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಪ್ರಮೋದ ಮುನೋಳಿ ಅವರು ಆಯ್ಕೆ ಯಾಗಿದ್ದಾರೆ. ಸಭಾದ ರಾಜ್ಯ ಘಟಕದ ಅಧ್ಯಕ್ಷ ಬಿ.ಎನ್.ವಿ. ಸುಬ್ರ ಮಣ್ಯ 2012-13ನೇ ಅವಧಿಗೆ ಈ ನೇಮಕ ಮಾಡಿ ಆದೇಶ ಹೊರಡಿ ಸ್ದ್ದಿದು, ಸಭಾದ ಎಲ್ಲಾ ಸಭೆ, ಸಮಾ ರಂಭ ಹಾಗೂ ಸಂಘಟನೆಯಲ್ಲಿ ಪಾಲ್ಗೊಂಡು ಸದೃಢ ಸಂಸ್ಥೆ ನಿರ್ಮಾಣ ಮಾಡಲು ಶ್ರಮಿಸುವಂತೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.