ADVERTISEMENT

ಕಳಪೆ ಆಹಾರ ನಿರಾಕರಿಸಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 7:20 IST
Last Updated 24 ಡಿಸೆಂಬರ್ 2013, 7:20 IST
ರಾತ್ರಿಯ ಬಿಸಿ ಅನ್ನದಲ್ಲಿ ಮಧ್ಯಾಹ್ನದ ತಂಗಳನ್ನವನ್ನು ಕೂಡಿಸಲಾಗಿದೆ ಎಂದು ಆರೋಪಿಸಿದ ಸಪ್ತಾಪುರದ ಬಿಸಿಎಂ ಹಾಸ್ಟೆಲ್‌ ವಿದ್ಯಾರ್ಥಿಗಳು, ಅದಕ್ಕೆ ಪೂರಕವಾಗಿ ಅನ್ನವನ್ನು ತೋರಿಸಿದರು
ರಾತ್ರಿಯ ಬಿಸಿ ಅನ್ನದಲ್ಲಿ ಮಧ್ಯಾಹ್ನದ ತಂಗಳನ್ನವನ್ನು ಕೂಡಿಸಲಾಗಿದೆ ಎಂದು ಆರೋಪಿಸಿದ ಸಪ್ತಾಪುರದ ಬಿಸಿಎಂ ಹಾಸ್ಟೆಲ್‌ ವಿದ್ಯಾರ್ಥಿಗಳು, ಅದಕ್ಕೆ ಪೂರಕವಾಗಿ ಅನ್ನವನ್ನು ತೋರಿಸಿದರು   

ಧಾರವಾಡ: ಇಲ್ಲಿಯ ಸಪ್ತಾಪುರದಲ್ಲಿ ಬಿಸಿಎಂ ಇಲಾಖೆ ನಡೆಸುತ್ತಿರುವ ವಿದ್ಯಾ­ರ್ಥಿ­ಗಳ ವಸತಿ ನಿಲಯದಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಸೋಮ­ವಾರ ರಾತ್ರಿ ಊಟ ಬಿಟ್ಟು ಪ್ರತಿಭಟನೆ ನಡೆಸಿದರು.

‘ಕಳೆದ ಹಲವು ತಿಂಗಳುಗಳಿಂದ ಕಲಬೆರಕೆ ಆಹಾರ ನೀಡಲಾಗುತ್ತಿದೆ. ಬಿಸಿ ಊಟದೊಂದಿಗೆ ತಂಗಳನ್ನವನ್ನು ಸೇರಿಸಿ ನೀಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪರಿ­ಸ್ಥಿತಿ ಸುಧಾರಿಸಿಲ್ಲ’ ಎಂದು ವಿದ್ಯಾರ್ಥಿ­ಗಳು ಆರೋಪಿಸಿದರು.

‘ಹಲವು ಬಾರಿ ಹಳಸಿದ ಅನ್ನವನ್ನು ನೀಡಲಾಗುತ್ತಿದ್ದು, ಕೊಳೆತ ತರಕಾರಿ­ಯನ್ನೂ ಅಡುಗೆಯಲ್ಲಿ ಬಳಸಲಾಗು­ತ್ತಿದೆ. ಆ ಕುರಿತು ಪ್ರಶ್ನಿಸಿದವರ ವಿರುದ್ಧ ಅಡುಗೆಯವರು ಬೆದರಿಕೆ ಹಾಕುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಸೋಮವಾರ ರಾತ್ರಿ ಕಳಪೆ ಆಹಾರ ನೀಡಿದ್ದರಿಂದ ಕೆಲ ವಿದ್ಯಾರ್ಥಿಗಳು ಊಟ ಮಾಡದೇ ಮಲಗಿದರು.

ಸಮಸ್ಯೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಸಿದ್ಧಲಿಂಗಯ್ಯ ಹಿರೇ­ಮಠ, ‘ಈ ಬಗ್ಗೆ ನಾನು ಅಡುಗೆ­ಯವರಿಗೆ ಸಾಕಷ್ಟು ಬಾರಿ ಹೇಳಿದ್ದೇನೆ. ಆದರೂ ಒಮ್ಮೊಮ್ಮೆ ಹೀಗಾಗುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳೂ ಗಮನಕ್ಕೆ ತಂದಿದ್ದಾರೆ. ಆದರೂ, ಮಧ್ಯಾಹ್ನ ಮಾಡಿದ ಅಡುಗೆಯನ್ನು ರಾತ್ರಿ ಊಟ ಮಾಡಲು ಕಷ್ಟವೇನು? ನಾನು ನಮ್ಮ ಮನೆಯಲ್ಲಿ ಮಧ್ಯಾಹ್ನ ಮಾಡಿದ ಅನ್ನವನ್ನೇ ಊಟ ಮಾಡಿದೆ’ ಎಂದರು. ವಿದ್ಯಾರ್ಥಿಗಳು ನಂತರ ಜಿಲ್ಲಾಧಿಕಾರಿ ನಿವಾಸದ ಎದುರು ಪ್ರತಿಭಟನೆ ನಡೆಸಿ­ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.