ADVERTISEMENT

ಕಿರುಚಿತ್ರದ ಚಿತ್ರೀಕರಣ ಆರಂಭ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 4:35 IST
Last Updated 15 ಸೆಪ್ಟೆಂಬರ್ 2011, 4:35 IST

ಹುಬ್ಬಳ್ಳಿ: ನವನಗರದ ಬಸಮ್ಮ ವೀರಪ್ಪ ಸುತಗಟ್ಟಿ ಫಿಲ್ಮ್ ಹಾಗೂ ಕಲ್ಚರಲ್ ಡೆವಲಪ್‌ಮೆಂಟ್ ಸೊಸೈಟಿ ಆಶ್ರಯದಲ್ಲಿ `ಮಾಡಿದ್ದುಣ್ಣೋ ಮಹರಾಯ~ ಕಿರುಚಿತ್ರದ ಚಿತ್ರೀಕರಣ ಮುಹೂರ್ತ ಆರಂಭವಾಯಿತು.
ಎಪಿಎಂಸಿ ಎದುರಿನ ಶಾಂತಿನಿಕೇತನ ಕಾಲೊನಿಯ ಸಂಪತ್ ಶನೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.

ವಕೀಲ ಸದಾಶಿವ ಪಾಟೀಲ, ರೋಶನ್ ಸಿಂಗ್, ಕಿರಣ್ ಸುತಗಟ್ಟಿ, ಬಸವರಾಜ ಅಕ್ಕಿ, ಸಂಜೀವ ದೇಸಾಯಿ, ಜಗದೀಶ, ಮಹಾಂತೇಶ ಹವಳಣ್ಣವರ, ಮಕ್ತುಮ್ ಹಾಗೂ ಜಯದೇವ ಹಿರೇಮಠ ಹಾಜರಿದ್ದರು. ಕಥೆ ರೇಣುಕಯ್ಯ ಹಿರೇಮಠ, ಚಿತ್ರಕಥೆ, ಸಂಭಾಷಣೆ ಹಾಗೂ ಸಹನಿರ್ದೇಶನ ವಿಠಲ ಜ್ಯೋತೆಪ್ಪ ತಾರಿಹಾಳ, ಪ್ರಕಾಶ ಕಮ್ಮಾರ ಪ್ರಸಾಧನ, ಮಂಜುನಾಥ ಧನ್ನೂರ ಛಾಯಾಗ್ರಹಣ ಹಾಗೂ ವಿಶಾಲ ಸುತಗಟ್ಟಿ ನಿರ್ದೇಶನ. ಜಯಶ್ರೀ ವಿ. ಸುತಗಟ್ಟಿ ನಿರ್ಮಾಪಕರು.

ಕಿರುಚಿತ್ರದಲ್ಲಿ ಪಿ. ರಾಘವೇಂದ್ರ, ಸಂದೀಪ, ಶ್ರೀಧರ, ರವಿ ಪಾಟೀಲ, ಬೆಳಗೇರಿ ಮಲ್ಲ, ಮಂಜುನಾಥ, ಯಲ್ಲಪ್ಪ, ರಾಜು ರಾಠೋಡ ಹಾಗೂ ಗೀತಾ ನಟಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.