ಧಾರವಾಡ: ಸುಮಾರು ರೂ 1 ಕೋಟಿ ಮೌಲ್ಯದ ಕೋಕೇನ್ ಹಾಗೂ ಕಾರನ್ನು ವಶಪಡಿಸಿಕೊಂಡ ಅಬಕಾರಿ ಪೊಲೀಸರು, ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ಗುರುವಾರ ಬೆಳಿಗ್ಗೆ ನರೇಂದ್ರ ಕ್ರಾಸ್ ಬಳಿ ನಡೆದಿದೆ.
ಬೆಳಗಾವಿಯಿಂದ ನಗರಕ್ಕೆ ಬರುತ್ತಿದ್ದ ಕಾರನ್ನು ಅಬಕಾರಿ ಪೊಲೀಸರು, ನರೇಂದ್ರ ಕ್ರಾಸ್ ಬಳಿ ತಡೆದು ತಪಾಸಣೆ ನಡೆಸಿದಾಗ ಕೋಕೇನ್ ಇರುವುದು ಪತ್ತೆಯಾಯಿತು. ಕೂಡಲೇ ಕಾರಿನಲ್ಲಿದ್ದ ಬೆಳಗಾವಿಯ ಆಕಾಶ ನಂದವಾಡೇಕರನನ್ನು ಬಂಧಿಸಲಾಯಿತು. ಚಾಲಕ ಸೂರಜ್ ಪರಾರಿಯಾಗಿದ್ದಾನೆ.
ದಾಳಿ ಸಂದರ್ಭದಲ್ಲಿ ಅಬಕಾರಿ ಇನ್ಸ್‌ಪೆಕ್ಟರ್ ಛಾಯಾ ಅಂಗಡಿ, ಸಿಬ್ಬಂದಿಯಾದ ಸುನೀಲ ಕಲಾಲ್, ಡಿ.ಬಿ. ಸಾಚಾರ, ಎ.ಎನ್. ಶಿರಹಟ್ಟಿ, ಪಿ.ಎಸ್. ಕೋಟಿ ಮೊದಲಾದವರು ಹಾಜರಿದ್ದರು. ವಶಪಡಿಸಿಕೊಂಡಿದ್ದು ಕೋಕೇನ್ ಅಲ್ಲ. ಒಂದೂವರೆ ಕಿಲೋದ ಬ್ರೌನ್ ಶುಗರ್. ಅದರ ಮೌಲ್ಯ ರೂ 1.5 ಕೋಟಿ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.