ADVERTISEMENT

ಗಂಗೂಬಾಯಿ ಹಾನಗಲ್ ಜಯಂತಿ

ಕುಟುಂಬದ ಸದಸ್ಯರು ಗೈರು!

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 7:14 IST
Last Updated 6 ಮಾರ್ಚ್ 2014, 7:14 IST
ಹುಬ್ಬಳ್ಳಿಯ ಉಣಕಲ್‌ ಬಳಿ ಇರುವ ಭಾರತೀಯ ಶಾಸ್ತ್ರೀಯ ಸಂಗೀತ ಗುರುಕುಲ ಮಾದರಿಯ ಶಿಕ್ಷಣ ಕೇಂದ್ರದಲ್ಲಿ ಬುಧವಾರ ಗಾನ ವಿದುಷಿ ಡಾ.ಗಂಗೂಬಾಯಿ ಹಾನಗಲ್‌ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಗಂಗೂಬಾಯಿ ಅವರ ಸಮಾಧಿಗೆ ಗೌರವ ಸಲ್ಲಿಸಲಾಯಿತು.
ಹುಬ್ಬಳ್ಳಿಯ ಉಣಕಲ್‌ ಬಳಿ ಇರುವ ಭಾರತೀಯ ಶಾಸ್ತ್ರೀಯ ಸಂಗೀತ ಗುರುಕುಲ ಮಾದರಿಯ ಶಿಕ್ಷಣ ಕೇಂದ್ರದಲ್ಲಿ ಬುಧವಾರ ಗಾನ ವಿದುಷಿ ಡಾ.ಗಂಗೂಬಾಯಿ ಹಾನಗಲ್‌ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಗಂಗೂಬಾಯಿ ಅವರ ಸಮಾಧಿಗೆ ಗೌರವ ಸಲ್ಲಿಸಲಾಯಿತು.   

ಧಾರವಾಡ: ಗಾನ ವಿದೂಷಿ ಡಾ.ಗಂಗೂಬಾಯಿ ಹಾನಗಲ್ ಅವರ 101ನೇ ಜಯಂತಿ ಅಂಗವಾಗಿ ಗಂಗೂಬಾಯಿ ಗುರುಕುಲ ಟ್ರಸ್ಟ್‌ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರು ಗಂಗೂಬಾಯಿ ಜನ್ಮ ತಾಳಿದ ಶುಕ್ರವಾರ ಪೇಟೆಯ ಮನೆಯಲ್ಲಿ ಬುಧವಾರ ಹಾನಗಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.

ಪಾಲಿಕೆ ಸದಸ್ಯ ಶಂಕರ ಶೇಳಕೆ, ಟ್ರಸ್ಟ್‌ ಸದಸ್ಯ ಕಾರ್ಯದರ್ಶಿ ಬಿ.ಡಿ.ಹಿರೇಗೌಡರ ಮತ್ತು ಪಂ.ಬಸವ ರಾಜ ರಾಜಗುರು ಟ್ರಸ್ಟ್‌ ಸದಸ್ಯ ನಿಜಗುಣ ರಾಜಗುರು ಉಪಸ್ಥಿತರಿದ್ದರು.

ಡಾ.ಗಂಗೂಬಾಯಿ ಹಾನಗಲ್ ಗುರುಕುಲದ ಸಂಗೀತ ಶಿಕ್ಷಕರಾದ ಶೇಷಗುಡಿ ಅವರು ಗಾಯನ ಪ್ರಸ್ತುತಪಡಿಸಿದರು.
ಜಿಲ್ಲಾಡಳಿಯ ವಾಡಿಕೆಯಂತೆ ಈ ಕಾರ್ಯಕ್ರಮ ಆಯೋಜಿಸಿತ್ತು. ವಿಶೇಷವೆಂದರೆ, ಹಾನಗಲ್‌ ಮನೆ ತನದ ಯಾವೊಬ್ಬ ಸದಸ್ಯರೂ ಸಮಾರಂಭದಲ್ಲಿ ಹಾಜರಿರಲಿಲ್ಲ.

ಈ ಬಗ್ಗೆ ಕಾರಣ ಹುಡುಕಿದಾಗ, ಬೆಂಗಳೂರಿನಲ್ಲಿ ಗಂಗಜ್ಜಿ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ ಇರುವುದರಿಂದ ಹಾಗೂ ಹುಬ್ಬಳ್ಳಿಯ ಗುರುಕುಲ ದಲ್ಲಿಯೂ ಸಮಾರಂಭ ಇರುವುದರಿಂದ ಜಿಲ್ಲಾಡ ಳಿತದ ಈ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು ಭಾಗವಹಿಸಲಿಲ್ಲ ಎಂಬುದು ಗೊತ್ತಾಯಿತು.

ಗಂಗಜ್ಜಿಗೆ ಗಾನ ನಮನ
ಹುಬ್ಬಳ್ಳಿ: ಉಣಕಲ್‌ ಬಳಿ ಇರುವ ಡಾ.ಗಂಗೂ ಬಾಯಿ ಹಾನಗಲ್ ಗುರುಕುಲ ಟ್ರಸ್ಟ್‌ನ ಭಾರತೀಯ ಶಾಸ್ತ್ರೀಯ ಸಂಗೀತ ಗುರುಕುಲ ಮಾದರಿಯ ಶಿಕ್ಷಣ ಕೇಂದ್ರದಲ್ಲಿ ಬುಧವಾರ ಗಾನ ವಿದುಷಿ ಡಾ.ಗಂಗೂ ಬಾಯಿ ಹಾನಗಲ್‌ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿತ್ತು. ಕೇಂದ್ರದ ಆವರಣದಲ್ಲಿರುವ ಗಂಗೂ ಬಾಯಿ ಅವರ ಸಮಾಧಿಗೆ ಹೂಗಳನ್ನು ಅರ್ಪಿಸಿ, ಗೌರವ ಸಲ್ಲಿಸಲಾಯಿತು.

ನಂತರ ನಡೆದ ಕಾರ್ಯಕ್ರಮದಲ್ಲಿ ಗುರುಕುಲದ ವಿದ್ಯಾರ್ಥಿಗಳಾದ ಅನಿರುದ್ಧ ದೇಶಪಾಂಡೆ, ಮಂಜು ನಾಥ ಬೈಲಹೊಂಗಲ, ಹರಿಯಾಣದ ಮೋನಿಕಾ ಸೋನಿ ಹಾಗೂ ಇತರರು ಸಂಗೀತ ಕಚೇರಿ ನಡೆಸುವ ಮೂಲಕ ಗಂಗಜ್ಜಿಗೆ ಗಾನ ನಮನ ಸಲ್ಲಿಸಿದರು.

ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್, ಪಂ. ಮಣಿಪ್ರಸಾದ್, ಪಂ. ಕೈವಲ್ಯಕುಮಾರ್ ಗುರವ, ಪಂ. ಗಣಪತಿ ಭಟ್‌ ಹಾಸಣಗಿ, ಎನ್‌.ರಾಜಮ್ಮ, ಶ್ರೀಧರ ಮಾಂಡ್ರೆ, ಅಶೋಕನಗರ ಠಾಣೆ ಪಿಐ ಎನ್‌.ಪುಷ್ಪಲತಾ, ಆಡಳಿತಾಧಿಕಾರಿ ಬದರಿನಾಥ ಲಕ್ಷ್ಮೇಶ್ವರ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.