ADVERTISEMENT

ದಾಳಿಗೊಳಗಾದ ಜಿಂಕೆಗೆ `ಜೀವ'

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 10:09 IST
Last Updated 9 ಜುಲೈ 2013, 10:09 IST

ಗುಡಗೇರಿ: ಗ್ರಾಮದ ಹೊರವಲಯದಲ್ಲಿ ನಾಯಿಗಳ ದಾಳಿಯಿಂದಾಗಿ ಕಕ್ಕಾಬಿಕ್ಕಿಯಾಗಿ ನಿಂತಿದ್ದ ಜಿಂಕೆಯೊಂದನ್ನು ಮಂಜುನಾಥ ಗೋವಿಂದಪ್ಪ ಜಂತ್ಲಿ ಎಂಬ ಯುವಕ ರಕ್ಷಿಸಿ ಪೋಲಿಸ್ ಠಾಣೆಗೆ ತಂದೊಪ್ಪಿಸಿದ ಘಟನೆ ಜರುಗಿದೆ.

ಪೊಲೀಸ್ ಠಾಣೆಯಲ್ಲಿ ಜಿಂಕೆಗೆ ಉಪಚಾರ ಮಾಡಿದ ನಂತರ ಅರಣ್ಯ ಇಲಾಖೆಗೆ ವಿಷಯ ತಿಳಿಸಲಾಯಿತು.

ಠಾಣೆಗೆ ಬಂದ ಉಪವಲಯ ಅರಣ್ಯಾಧಿಕಾರಿ ಎಸ್.ಎಚ್. ತಡಕೋಡ, ವೀಕ್ಷಕ ಎನ್. ಜಿ.ಶಿರಹಟ್ಟಿ  ಅವರಿಗೆ ಪಿಎಸ್‌ಐ ಸುರೇಶ.ಆರ್. ಗಡ್ಡಿ, ಸಿಬ್ಬಂದಿ ಆರ್.ಪಿ. ವಾಲೀಕಾರ , ಡಿ .ವಿ. ಪಾಟೀಲ, ಪವಾಡಶೆಟ್ಟರ,  ಆರ್.ಎಂ. ಶಂಕಿನದಾಸರ ಅವರು ಜಿಂಕೆಯನ್ನು ಒಪ್ಪಿಸಿದರು. ಜಿಂಕೆಯನ್ನು ಬಿಂಕದಕಟ್ಟೆ ಮೃಗಾಲಯಕ್ಕೆ ತಲುಪಿಸುವುದಾಗಿ ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.