ADVERTISEMENT

`ನಾಲ್ವಾಡ ಡಾಕ್ಟ್ರು' ಕೋಟ್ಯಧಿಪತಿ

ಮೂರು ಕಾರು, ಎರಡು ದ್ವಿಚಕ್ರವಾಹನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 12:49 IST
Last Updated 18 ಏಪ್ರಿಲ್ 2013, 12:49 IST

ಹುಬ್ಬಳ್ಳಿ: ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿರುದ್ಧ ಕಾಂಗ್ರೆಸ್ ಪಕ್ಷದ ಅಚ್ಚರಿಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಾ.ಮಹೇಶ ನಾಲ್ವಾಡ ಬುಧವಾರ ನಾಮಪತ್ರ ಸಲ್ಲಿಸಿದ್ದು, ಚುನಾವಣಾ ಆಯೋಗದ ಎದುರು ಘೋಷಣೆ ಮಾಡಿರುವ ಆಸ್ತಿಯ ವಿವರ ಕೆಳಗಿನಂತಿದೆ.

ಗುಲ್ಬರ್ಗದ ಎಂ.ಆರ್.ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದಿರುವ ಡಾ.ಮಹೇಶ್ ಅವರ ಹೆಸರಿನಲ್ಲಿ 1,98,35,222 ರೂಪಾಯಿ ಮೊತ್ತದ ಚರಾಸ್ತಿ ಇದ್ದು, ಪತ್ನಿ ಸುಗಂಧಾ ಎಂ. ನಾಲ್ವಾಡ ಹೆಸರಿನಲ್ಲಿ 9,25,625 ರೂಪಾಯಿ ಠೇವಣಿ ಇದೆ. ಪುತ್ರರಾದ ಅಭಿನವ ಹಾಗೂ ಅಭಿಜಿತ್ ಹೆಸರಿನಲ್ಲಿ ಯಾವುದೇ ಚರಾಸ್ತಿ ಇಲ್ಲ.

ಡಾ.ಮಹೇಶ್ ಅವರ ಹೆಸರಿನಲ್ಲಿ 2,23,00,000 ರೂಪಾಯಿ ಮೊತ್ತದ ಸ್ಥಿರಾಸ್ತಿ ಇದ್ದು, 35,00,000 ಲಕ್ಷ ಮೊತ್ತದ ಪಿತ್ರಾರ್ಜಿ ತ ಆಸ್ತಿ ಹೊಂದಿದ್ದಾರೆ. ಪತ್ನಿ ಸುಗಂಧಾ ಹೆಸರಿನಲ್ಲಿ 9 ಲಕ್ಷ ರೂಪಾಯಿ ಮೊತ್ತದ ಆಸ್ತಿ ಹೊಂದಿದ್ದಾರೆ.  ವಿವಿಧ ಹಣಕಾಸು ಸಂಸ್ಥೆಗಳಿಂದ 1,13,62,000 ರೂಪಾಯಿ ಮೊತ್ತದ ಸಾಲ ಹೊಂದಿದ್ದಾರೆ.
ಹುಬ್ಬಳ್ಳಿಯ ಗೋಕುಲ ರಸ್ತೆಯ ಬಸವೇಶ್ವರ ನಗರದಲ್ಲಿ ಸ್ವಂತ ಮನೆ ಇದೆ.

1400 ಗ್ರಾಂ ಬೆಳ್ಳಿಯ ಆಭರಣ, 150 ಗ್ರಾಂ  ಚಿನ್ನದ ಆಭರಣ, ಕುಟುಂಬದ ಸದಸ್ಯರ ಹೆಸರಿನಲ್ಲಿ ್ಙ 8,67,260 ಮೊತ್ತದ ವಿಮೆ ಮಾಡಿಸಿದ್ದಾರೆ. ವಿವಿಧ ಕಂಪೆನಿಗಳಲ್ಲಿ ರೂ22,13,920 ಮೊತ್ತದ ಷೇರು ಹೂಡಿಕೆ ಮಾಡಿದ್ದಾರೆ. 

ಐದನೇ ಬಾರಿ ಕಣಕ್ಕಿಳಿದಿರುವ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಳಿ ಒಂದೇ ಒಂದು ವಾಹನವಿಲ್ಲ. ಆದರೆ ಇದೇ ಮೊದಲ ಬಾರಿಗೆ ಕಣಕ್ಕಿಳಿದಿರುವ ನಾಲ್ವಾಡ ಡಾಕ್ಟರ್ ಬಳಿ ಮೂರು ಕಾರು, ಎರಡು ದ್ವಿಚಕ್ರ ವಾಹನಗಳಿವೆ. 17,5 ಲಕ್ಷ ರೂಪಾಯಿ ಮೊತ್ತದ ಇನ್ನೋವಾ ಕಾರು, ರೂ 5.8 ಲಕ್ಷ ಮೊತ್ತದ ಇಂಡಿಕಾ ಇವಿ 2 ಕಾರು, ರೂ 2 ಲಕ್ಷ ಮೊತ್ತದ ಇಂಡಿಕಾ ಡೀಲಕ್ಸ್ ಕಾರು,ರೂ 1.4 ಲಕ್ಷ ಮೊತ್ತದ ರಾಯಲ್ ಎನ್‌ಫೀಲ್ಡ್ ಬೈಕ್, ಆ್ಯಕ್ಟಿವ್ ಹೊಂಡಾ ಸ್ಕೂಟರ್, ಟ್ರ್ಯಾಕ್ಟರ್ ಇವರ ಬಳಿಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.