ADVERTISEMENT

ನಿಧಿ ಶೆಟ್ಟಿ ರಂಗಪ್ರವೇಶ ಇಂದು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2013, 6:09 IST
Last Updated 12 ಅಕ್ಟೋಬರ್ 2013, 6:09 IST

ಧಾರವಾಡ: ಇಲ್ಲಿಯ ಭಾರತೀಯ ನೃತ್ಯ ಅಕಾ ಡೆಮಿಯ ವಿದ್ಯಾರ್ಥಿನಿ ನಿಧಿ ಶೆಟ್ಟಿಯ ರಂಗ ಪ್ರವೇಶ ಇದೇ 12 ರಂದು ಸಂಜೆ 5ಕ್ಕೆ ನಗರದ ಸೃಜನಾ ರಂಗ ಮಂದಿರ­ದಲ್ಲಿ ನೆರವೇರಲಿದೆ.

ನಗರದಲ್ಲಿ ಗುರುವಾರ ಪತ್ರಿಕಾ­ಗೋಷ್ಠಿಯಲ್ಲಿ  ನಿಧಿಯ ನೃತ್ಯ ಗುರು ವಿದ್ವಾನ್‌ ರಾಜೇಂದ್ರ ಟೊಣಪಿ ಈ ಮಾಹಿತಿ ನೀಡಿದರು. ಪ್ರಸ್ತುತ ನಗರದ ಪ್ರಜಂಟೇಷನ್‌ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ನಿಧಿ, ಎಂಟನೇ ತರಗತಿಯಲ್ಲಿದ್ದಾಗಲೇ ವಿವಿಧ ಬಗೆಯ ನೃತ್ಯ ಪ್ರಕಾರಗಳಿಗೆ ನೃತ್ಯ ಸಂಯೋಜನೆ (ಕೊರಿಯೊಗ್ರಫಿ) ಮಾಡಿದ್ದಾಳೆ.

ರಂಗಪ್ರವೇಶ  ಕಾರ್ಯಕ್ರಮವನ್ನು ಎಸ್‌ಡಿಎಂ ಶಿಕ್ಷಣ ಸೊಸೈಟಿ ಕಾರ್ಯ­ದರ್ಶಿ ಜಿನೇಂದ್ರ ಪ್ರಸಾದ ಉದ್ಘಾಟಿ­ಸುವರು.  ಗೋಷ್ಠಿಯಲ್ಲಿ ನಿಧಿ ತಂದೆ ಉದಯ ಎಸ್‌.ಶೆಟ್ಟಿ. ಪಾಲಿಕೆ ಸದಸ್ಯ ವಿಜಯಾ ನಂದ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.