ADVERTISEMENT

`ನ್ಯಾಯಾಲಯದ ಮೇಲೆ ಅತಿ ಅವಲಂಬನೆ ಬೇಡ'

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 8:11 IST
Last Updated 10 ಏಪ್ರಿಲ್ 2013, 8:11 IST

ಹುಬ್ಬಳ್ಳಿ: `ಸರ್ಕಾರ ಎಲ್ಲ ಪ್ರಕರಣಗ ಳನ್ನು ನ್ಯಾಯಾಲಯಗಳಿಗೆ ಒಪ್ಪಿಸಿ ಕೈತೊಳೆದುಕೊಳ್ಳುವುದು ಸರಿಯಲ್ಲ. ನ್ಯಾಯಾಲಯಗಳು ಎಲ್ಲ ಪ್ರಕರಣಗ ಳನ್ನು ಇತ್ಯರ್ಥಗೊಳಿಸುವಷ್ಟು ಶಕ್ತವಾ ಗಿಲ್ಲ' ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ. ವಿ.ಎಸ್. ಮಳಿಮಠ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ `ಸೈಬರ್ ಕಾನೂನು, ಅಪರಾಧ ಮತ್ತು ಡಿಜಿಟಲ್ ಸಾಕ್ಷ್ಯ ಗಳು-ಹೊಸ ಆಯಾಮಗಳು' ಕುರಿತ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನ್ಯಾಯಾಲಯಗಳನ್ನು ಅತಿಯಾಗಿ ಅವಲಂಬಿಸುತ್ತಿದ್ದು, ಇದರಿಂದ ನ್ಯಾಯ ನೀಡಿಕೆಯಲ್ಲಿ ವಿಳಂಬವಾಗುತ್ತಿದೆ ಎಂದು ಅವರು ನುಡಿದರು.

ಈಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ. ದೇಶದಲ್ಲಿನ ಅತ್ಯಾಚಾರ ಪ್ರಕರಣಗಳ ಪೈಕಿ ಶೇ 25 ರಷ್ಟು ಪ್ರಕರಣಗಳಲ್ಲಿ ಮಾತ್ರ ಆರೋಪಿ ಗಳಿಗೆ ಶಿಕ್ಷೆಯಾಗುತ್ತಿದೆ. ಅತ್ಯಾಚಾರಕ್ಕೆ ಒಳಗಾದ ಶೇ 75ರಷ್ಟು ಮಹಿಳೆಯರಿಗೆ ನ್ಯಾಯ ಸಿಗುತ್ತಿಲ್ಲ. ಅಂತೆಯೇ, ನ್ಯಾಯಾಲಯಗಳಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣಗಳ ಪೈಕಿ ಶೇ 90ರಷ್ಟು ಪ್ರಕರಣಗಳು ಸತ್ಯವಾಗಿರು ತ್ತವೆ. ಯಾವ ಮಹಿಳೆಯೂ ತಾನು ಅತ್ಯಾಚಾರಕ್ಕೆ ಒಳಗಾದವಳು ಎಂದು ಸುಳ್ಳು ಹೇಳಬಯಸುವುದಿಲ್ಲ ಎಂದು ಅವರು ನುಡಿದರು.

ಕುಲಪತಿ ಪ್ರೊ. ಟಿ.ಆರ್. ಸುಬ್ರ ಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚು ವರಿ ಪೊಲೀಸ್ ಮಹಾ ನಿರ್ದೇಶಕ ಅಶಿತ್ ಮೋಹನ್ ಪ್ರಸಾದ್, ಪದ್ಮಶ್ರೀ ಪುರಸ್ಕೃತ ಡಾ. ಪಿ. ಚಂದ್ರಶೇಖರನ್, ವಕೀಲ ಕೆ. ಶಂಕರ್, ಕಂಪನಿ ಸೆಕ್ರಟರಿ ಶಿಲ್ಪಾ ಕಿರಣ್, ಕುಲಸಚಿವರಾದ ಡಾ. ಬಿ.ಎಸ್. ರೆಡ್ಡಿ, ಸುಭಾಷ ಮಾಳಖೇಡೆ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.