ADVERTISEMENT

`ಪತ್ರಿಕೋದ್ಯಮ ಪರಿವರ್ತನಾ ಕ್ಷೇತ್ರ'

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 6:15 IST
Last Updated 5 ಜುಲೈ 2013, 6:15 IST

ಕುಂದಗೋಳ: `ಸ್ಪಷ್ಟತೆ, ನಿಖರತೆ, ಕ್ರಿಯಾಶೀಲತೆ ಹೊಂದಿರುವ ಅಂಗವೇ ಪತ್ರಿಕಾರಂಗವಾಗಿದೆ. ಇದು  ನಿರಂತರವಾಗಿ ಪರಿವರ್ತನೆ ಆಗುತ್ತಿರುವ ವೃತ್ತಿಪರ ಕ್ಷೇತ್ರವಾಗಿದೆ' ಎಂದು ಪ್ರಾಚಾರ್ಯೆ ಆಶಾ ಜಮಖಂಡಿ ಹೇಳಿದರು.

ಇಲ್ಲಿಯ ಎಸ್‌ಬಿಎಸ್ ಎಸ್. ಎಂ. ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಮತ್ತು ತಾಲ್ಲೂಕು ಕಾರ್ಯನಿರತ ಪರ್ತಕರ್ತರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಿಕೆ ಸಮಾಜದ ಕಣ್ಣು. ಲೋಪದೋಷ ತಿದ್ದುವ ಕಾರ್ಯವನ್ನು ಅದು ಪ್ರಾಮಾಣಿಕವಾಗಿ ಮಾಡಬೇಕು ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಗುರುಸ್ವಾಮಿ ಬಾಳಿಹಳ್ಳಿಮಠ ಮಾತನಾಡಿ, ಪತ್ರಿಕೆ ಎಂಬುದು ಬಾಳಿನ ಸಂಗಾತಿ ಇದ್ದಂತೆ. ಪ್ರತಿ ಮನೆಗೊಂದು ಪತ್ರಿಕೆ ಇರಬೇಕು. ಇದರಿಂದ ಮನೆ ಮಂದಿ ಎಲ್ಲರೂ ಅಕ್ಷರಸ್ಥರಾಗಲು ಸಾಧ್ಯಎಂದರು.

ಪ್ರೊ. ಇಬ್ರಾಹಿಂ ಆಶಮ್ಮನವರ ಮಾತನಾಡಿ, ಪತ್ರಿಕೆ ನಾಲ್ಕು ದಿಕ್ಕುನ ತಾಜಾ ಸುದ್ದಿಗಳನ್ನು ಕೊಡುತ್ತದೆ. ಜಗತ್ತಿನ ಎಲ್ಲ ವಿಷಯಗಳನ್ನು ಅರಿಯಲು ಪತ್ರಿಕೆ ಓದಬೇಕು. ಅದರಿಂದ ಜ್ಞಾನದ ಹರಿವು ವಿಸ್ತಾರಗೊಳ್ಳಲಿದೆ ಎಂದರು.

ಸಂಘದ ಗೌರವಾಧ್ಯಕ್ಷ ಕೆ.ಬಿ. ಹೊಳ್ಳಣ್ಣವರ, ಕಾರ್ಯದರ್ಶಿ ಅಶೋಕ ಘೋರ್ಪಡೆ,  ಖಜಾಂಚಿ ವೈ.ಡಿ. ಹೊಸೂರ, ವಾಸುದೇವ ಮುರಗಿ, ಬಸವರಾಜ ಹೊಳ್ಳಣ್ಣವರ, ಗಂಗಾಧರ ಡಾಂಗೆ ಹಾಜರಿದ್ದರು. ಬಸಮ್ಮೋ ಕಠಾಣಿ, ದೀಪಾ ಅಣ್ಣಿಗೇರಿ ಪ್ರಾರ್ಥಿಸಿದರು. ಪ್ರೊ. ಎಸ್.ಸಿ. ಪ್ರಭಯ್ಯನವರಮಠ ನಿರೂಪಿಸಿದರು. ಪ್ರೊ. ಪಿ.ಆರ್. ಕುಲಕರ್ಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.