ADVERTISEMENT

‘ಪರಿಹಾರ ನೀಡದಿದ್ದರೆ, ಕಾಮಗಾರಿಗೆ ತಡೆ’

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಭೂಮಿ ಕೊಟ್ಟ ರೈತರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 9:47 IST
Last Updated 30 ಮಾರ್ಚ್ 2018, 9:47 IST
ರಾಷ್ಟ್ರೀಯ ಹೆದ್ದಾರಿ– 63ರ ವಿಸ್ತರಣೆಗೆ ಭೂಮಿ ನೀಡಿರುವ ರೈತರು ಗುರುವಾರ ಸಭೆ ನಡೆಸಿದರು
ರಾಷ್ಟ್ರೀಯ ಹೆದ್ದಾರಿ– 63ರ ವಿಸ್ತರಣೆಗೆ ಭೂಮಿ ನೀಡಿರುವ ರೈತರು ಗುರುವಾರ ಸಭೆ ನಡೆಸಿದರು   

ಹುಬ್ಬಳ್ಳಿ: ಹುಬ್ಬಳ್ಳಿ–ಗದಗ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಭೂಮಿ ನೀಡಿರುವ ರೈತರಿಗೆ ಏಪ್ರಿಲ್ 5ರೊಳಗೆ ಸೂಕ್ತ ಪರಿಹಾರ ಪಾವತಿಸದಿದ್ದರೆ, ಕಾಮಗಾರಿ ತಡೆಯಲಾಗುವುದು ಎಂದು ಹೆದ್ದಾರಿ ವಿಸ್ತರಣೆಗೆ ಭೂಮಿ ನೀಡಿರುವ ಭಂಡಿವಾಡ, ಶಿರಗುಪ್ಪಿ, ನಲವಡಿ, ಭದ್ರಾಪೂರ, ಅಣ್ಣಿಗೇರಿ ಹಾಗೂ ಮಂಟೂರ ಗ್ರಾಮಗಳ ರೈತರು ಎಚ್ಚರಿಕೆ ನೀಡಿದ್ದಾರೆ.

ಶಿರಗುಪ್ಪಿಯಲ್ಲಿ ಗುರುವಾರ ಸಭೆ ನಡೆಸಿದ ರೈತರು, ಜಮೀನು ಸ್ವಾಧೀನಪಡಿಸಿಕೊಂಡು ವರ್ಷವಾದರೂ ಇನ್ನೂ ಪರಿಹಾರ ಪಾವತಿಸಿಲ್ಲ. ಕೇಂದ್ರ ಸರ್ಕಾರದಿಂದ ಪರಿಹಾರ ಬಂದಿದ್ದರೂ, ರಾಜ್ಯ ಸರ್ಕಾರ ರೈತರಿಗೆ ತಲುಪಿಸುವಲ್ಲಿ ವಿಳಂಬ ಮಾಡುತ್ತಿದೆ. ಈ ಕುರಿತು ಅಧಿಕಾರಿಗಳನ್ನು ಕೇಳಿದರೆ, ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT