ADVERTISEMENT

ಫಲಪುಷ್ಪ ಪ್ರದರ್ಶನ: ಬಹುಮಾನ ವಿತರಣೆ

ಪೂರ್ಣಿಮಾ, ಸುಜಾತಾ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2013, 9:56 IST
Last Updated 5 ಅಕ್ಟೋಬರ್ 2013, 9:56 IST

ಹುಬ್ಬಳ್ಳಿ: ‘ಫಲಪುಷ್ಪ ಪ್ರದರ್ಶನದಂತಹ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಸಹಭಾಗಿತ್ವವೂ ಅವಶ್ಯ. ಹಾಗಾದಲ್ಲಿ ಮಾತ್ರ ಇಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಬಹುದು’ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ. ಡಿ.ಎಲ್‌. ಮಹೇಶ್ವರ ಹೇಳಿದರು.

ನಗರದ ಮಹಾತ್ಮಗಾಂಧಿ ಉದ್ಯಾನದ ಇಂದಿರಾ ಗಾಜಿನ ಮನೆ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಹೊಸ ಅನ್ವೇಷಣೆ ಹಾಗೂ ತಂತ್ರಜ್ಞಾನವನ್ನು ಪ್ರದರ್ಶನದಲ್ಲಿ ಪರಿಚಯಿಸುವ ಮೂಲಕ ಇದನ್ನು ಇನ್ನಷ್ಟು ಆಕರ್ಷಕವಾಗಿಸಬೇಕು. ಪುಷ್ಪಗಳ ಪ್ರದರ್ಶನಕ್ಕೆ ಇನ್ನಷ್ಟು ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.

ತೋಟಗಾರಿಕೆ ಇಲಾಖೆಯಲ್ಲಿನ ಅವಕಾಶಗಳ ಬಳಕೆಗೆ ಜನರು ಮುಂದಾಗಬೇಕು. ಆಸಕ್ತರಿಗೆ ತರಬೇತಿ ನೀಡಲು ಇಲಾಖೆಯು ಸಿದ್ಧವಿದ್ದು, ಈ ಸೌಲಭ್ಯವನ್ನು ಬಳಸಿಕೊಳ್ಳಲು ಮುಂದೆ ಬರಬೇಕು. ಹುಬ್ಬಳ್ಳಿ ನಗರದಲ್ಲಿ ನರ್ಸರಿ ಆರಂಭಕ್ಕೆ ಇಲಾಖೆ ಸಿದ್ಧವಿರುವುದಾಗಿ ಹೇಳಿದರು. ರೈತರಿಂದ ನೇರವಾಗಿ ಹಣ್ಣು–ತರಕಾರಿ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡಲು ಅನುಕೂಲವಾಗುವಂತೆ ಮೇಳ ಆಯೋಜಿಸಲು ಅವರು ಹಾಪ್‌ಕಾಮ್ಸ್‌ ಅಧ್ಯಕ್ಷರಿಗೆ ಸಲಹೆ ನೀಡಿದರು.

‘ಉದ್ಯಾನಗಳು ನಗರದ ಶ್ವಾಸಕೋಶ ಇದ್ದಂತೆ. ಮಾಲಿನ್ಯ ತಡೆಗಟ್ಟುವಲ್ಲಿ ಅವುಗಳ ಪಾತ್ರ ಪ್ರಮುಖವಾದುದು. ಆಹಾರ–ಮನೆಗೆ ನೀಡುವಷ್ಟೇ ಆದ್ಯತೆಯನ್ನು ಗಿಡ–ಮರ, ಉದ್ಯಾನಗಳ ಬೆಳವಣಿಗೆಗೂ ನೀಡಬೇಕು‘ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದ ಮುಖ್ಯಸ್ಥ ಡಾ. ವಿ.ಎಸ್. ಪಾಟೀಲ ಹೇಳಿದರು. 

ಫಲ–ಪುಷ್ಪ ಪ್ರದರ್ಶನ ಹಾಗೂ ಉದ್ಯಾನ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಧಾರವಾಡದಲ್ಲಿ ಉದ್ಯಾನ ನಿರ್ಮಾಣಕ್ಕೆ ಸಹಕರಿಸಿದ ಪಂಚಾಕ್ಷರಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಹಾಪ್‌ಕಾಮ್ಸ್‌ ಅಧ್ಯಕ್ಷ ಪ್ರಭು ಕೇಶಗೊಂಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಎನ್‌. ಕುಲಕರ್ಣಿ, ಪರಿಸರವಾದಿ ಶಂಕರ ಕುಂಬಿ, ಉದ್ಯಾನ ಮತ್ತು ಫಲಪುಷ್ಪ ಪ್ರದರ್ಶನ ಸಮಿತಿ ಅಧ್ಯಕ್ಷ ಎ.ಜಿ. ದೇಶಪಾಂಡೆ, ಜಂಟಿ ಕೃಷಿ ನಿರ್ದೇಶಕ ಎಸ್‌.ಎಂ. ಗಡಾದ, ಉಪ ನಿರ್ದೇಶಕ ಕೆ. ಧನರಾಜ್‌ ಇತರರು ಪಾಲ್ಗೊಂಡಿದ್ದರು.

ಪೂರ್ಣಿಮಾ, ಸುಜಾತಾ ಚಾಂಪಿಯನ್‌

ಹುಬ್ಬಳ್ಳಿ: 2013–14ರ ಸಾಲಿನ ತೋಟಗಾರಿಕೆ ಫಲ–ಪುಷ್ಪ ಪ್ರದರ್ಶನದ ಅಂಗವಾಗಿ ನಡೆದ ಉದ್ಯಾನಗಳ ಸ್ಪರ್ಧೆ­ಯಲ್ಲಿ ವಿವಿಧ ವಿಭಾಗಗಳಲ್ಲಿ ಬಹುಮಾನ ಗಳಿಸಿದ ಹುಬ್ಬಳ್ಳಿ ವಿಭಾಗದ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿವರ:

ಖಾಸಗಿ ಮನೆ ಆವರಣದ ಉದ್ಯಾನ: ಪೂರ್ಣಿಮಾ, ವಿಶ್ವೇಶ್ವರ ನಗರ, ಶಾಂತಿ ಕಾಲೊನಿ–ಚಾಂಪಿಯನ್‌. ಬಿ. ಬಸಣ್ಣ, ನಿವೃತ್ತ ಎಂಜಿನಿಯರ್‌, ಲಿಂಗರಾಜನಗರ–ಪ್ರಥಮ, ಡಾ. ಸುಜಾತಾ ಗಿರಿಜನ್, ಪುರುಷೋತ್ತಮ ನಗರ–ದ್ವಿತೀಯ, ಪ್ರೇಮಲತಾ ಪಾಟೀಲ, ಲಕ್ಷ್ಮಿ ಲೇಔಟ್‌–ದ್ವಿತೀಯ, ಸವಿತಾ ಸುರೇಶ, ಅಕ್ಷಯ ಪಾರ್ಕ್‌–ತೃತೀಯ, ಎ.ಎಸ್‌. ಪಾಟೀಲ, ನವನಗರ–ಸಮಾಧಾನಕರ.

ಖಾಸಗಿ ಮನೆ ಆವರಣದ ಹುಲ್ಲುಹಾಸು: ಡಾ. ಸುಜಾತಾ ಗಿರಿಜನ–ಚಾಂಪಿಯನ್‌, ಎಸ್.ಜಿ. ಲಿಂಗರಾಜ, ನವನಗರ–ಪ್ರಥಮ.
ಸರ್ಕಾರಿ ಬಂಗ್ಲೆ ಆವರಣದ ಉದ್ಯಾನ: ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರ ಬಂಗಲೆ, ಕೇಶ್ವಾಪುರ–ಚಾಂಪಿಯನ್‌; ಸರ್ಕಾರಿ ಬಂಗ್ಲೆ ಆವರಣದ ಹುಲ್ಲು ಹಾಸಿಗೆ: ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ–ಪ್ರಥಮ, ಪಾಲಿಕೆ ಆಯುಕ್ತರ ಕಚೇರಿ–ಪ್ರಥಮ; ಖಾಸಗಿ ಸಂಸ್ಥೆ ಆವರಣದ ದೊಡ್ಡ ಉದ್ಯಾನ: ಬಿ.ವಿ. ಭೂಮ­ರಡ್ಡಿ ಎಂಜಿನಿಯರಿಂಗ್‌ ಕಾಲೇಜು–ಚಾಂಪಿಯನ್‌; ಖಾಸಗಿ ಸಂಸ್ಥೆ ಆವರಣದ ಮಧ್ಯಮ ಉದ್ಯಾನ: ಪಿ.ಸಿ. ಜಾಬಿನ್‌ ಕಾಲೇಜು–ಚಾಂಪಿಯನ್‌, ಡಾ. ಗಂಗೂಬಾಯಿ ಹಾನಗಲ್‌ ಗುರುಕುಲ–ಪ್ರಥಮ. ಖಾಸಗಿ ಸಂಸ್ಥೆ ಆವರಣದ ಚಿಕ್ಕ ಉದ್ಯಾನ: ಕಾಡಸಿದ್ಧೇಶ್ವರ ಕಾಲೇಜು–ಚಾಂಪಿಯನ್‌, ಕೆಎಲ್‌ಇ ಫಾರ್ಮಸಿ ಕಾಲೇಜು–ಪ್ರಥಮ.
ಖಾಸಗಿ ಸಂಸ್ಥೆ ಆವರಣದ ಡೇರೆ ತೋಟ: ಪಿ.ಸಿ. ಜಾಬಿನ್‌ ಕಾಲೇಜು–ಚಾಂಪಿಯನ್‌, ಬಿವಿಬಿ ಕಾಲೇಜು–­ಪ್ರಥಮ. ಖಾಸಗಿ ಸಂಸ್ಥೆ ಆವರಣದ ಹುಲ್ಲು ಹಾಸಿಗೆ: ಬಿವಿಬಿ ಕಾಲೇಜು–ಚಾಂಪಿಯನ್‌, ಪಿ.ಸಿ. ಜಾಬಿನ್‌ ಕಾಲೇಜು–ಪ್ರಥಮ, ಕಾಡಸಿದ್ಧೇಶ್ವರ ಕಾಲೇಜು–ದ್ವಿತೀಯ. ಸರ್ಕಾರಿ ಸಂಸ್ಥೆ ಆವರಣದ ದೊಡ್ಡ ಉದ್ಯಾನ: ಕಿಮ್ಸ್‌–ಚಾಂಪಿಯನ್‌. ಸರ್ಕಾರಿ ಸಂಸ್ಥೆ ಆವರಣದ ದೊಡ್ಡ ಉದ್ಯಾನದ ಹುಲ್ಲುಹಾಸಿಗೆ–ರೈಲ್ವೆ ಗಾಲ್ಫ್‌ ಕ್ಲಬ್‌–ಚಾಂಪಿಯನ್‌, ಕಿಮ್ಸ್‌–ಪ್ರಥಮ.

ಸಾರ್ವಜನಿಕ ದೊಡ್ಡ ಉದ್ಯಾನ: ಮಹಾತ್ಮಗಾಂಧಿ ಉದ್ಯಾನ, ಗಾಜಿನಮನೆ–ಚಾಂಪಿಯನ್‌. ಉಣಕಲ್‌ ಕೆರೆ ಉದ್ಯಾನ–ಪ್ರಥಮ; ಸಾರ್ವಜನಿಕ ಮಧ್ಯಮ ಉದ್ಯಾನ: ನವನಗರ ಉದ್ಯಾನ–ಚಾಂಪಿಯನ್‌, ಬಾಲಭವನ ಉದ್ಯಾನ, ಭುವನೇಶ್ವರ ನಗರ–ಪ್ರಥಮ, ಭವಾನಿನಗರ ಉದ್ಯಾನ–ದ್ವಿತೀಯ. ಸಾರ್ವಜನಿಕ ದೊಡ್ಡ ಉದ್ಯಾನದ ಹುಲ್ಲುಹಾಸು: ಮಹಾತ್ಮಗಾಂಧಿ ಉದ್ಯಾನ–ಚಾಂಪಿಯನ್‌, ನವನಗರ ಉದ್ಯಾನ–ಪ್ರಥಮ. ಸಾರ್ವಜನಿಕ ಮಧ್ಯಮ ಉದ್ಯಾನದ ಹುಲ್ಲು­ಹಾಸು: ಭವಾನಿನಗರ ಉದ್ಯಾನ–ಪ್ರಥಮ, ಬಾಲ­ಭವನ ಉದ್ಯಾನ–ದ್ವಿತೀಯ.

ಸಾರ್ವಜನಿಕ ಚಿಕ್ಕ ಉದ್ಯಾನದ ಹುಲ್ಲುಹಾಸು: ಪ್ಲಾಗ್‌ ಪೋಸ್ಟ್‌ ಉದ್ಯಾನ, ಪಾಲಿಕೆ–ಪ್ರಥಮ. ಕಪ್‌ಸಾಸರ್ ಉದ್ಯಾನ–ದ್ವಿತೀಯ; ಕುಂಡಗಳ ಜೋಡಣೆ: ಬಿವಿಬಿ ಕಾಲೇಜು–ಚಾಂಪಿಯನ್‌, ಪಿ.ಸಿ. ಜಾಬಿನ್‌ ಕಾಲೇಜು–ಪ್ರಥಮ, ಕಾಡಸಿದ್ಧೇಶ್ವರ ಕಾಲೇಜು–­ದ್ವಿತೀಯ. ಖಾಸಗಿ ಸಂಸ್ಥೆಯ ವಿದ್ಯಾರ್ಥಿ ವಸತಿನಿಲಯ ಉದ್ಯಾನ–ಬಿವಿಬಿ ಕಾಲೇಜು–ಚಾಂಪಿ­ಯನ್‌.

ತರಕಾರಿ ತೋಟ: ಡಾ, ಸುಜಾತಾ, ಪುರುಷೋತ್ತಮ ನಗರ–ಚಾಂಪಿಯನ್‌, ಪ್ರೇಮಲತಾ ಪಾಟೀಲ–ಪ್ರಥಮ. ಅತ್ಯುತ್ತಮ ಔಷಧಿ ತೋಟ: ಕೆಎಲ್‌ಇ ಫಾರ್ಮಸಿ ಕಾಲೇಜು–ಚಾಂಪಿಯನ್‌. ಕಾಡಸಿದ್ಧೇಶ್ವರ ಕಾಲೇಜು–ಪ್ರಥಮ, ಪಿ.ಸಿ. ಜಾಬಿನ್‌ ಕಾಲೇಜು–ಪ್ರಥಮ; ಸೈಕಲ್‌ ಕುಂಡಗಳ ಜೋಡಣೆ: ಕಿಮ್ಸ್–ಪ್ರಥಮ. ವೃತ್ತದ ಅತ್ಯುತ್ತಮ ಹುಲ್ಲುಹಾಸಿಗೆ: ಚನ್ನಮ್ಮ ವೃತ್ತ–ಪ್ರಥಮ, ಅಶೋಕನಗರ ವೃತ್ತ–ದ್ವಿತೀಯ; ಖಾಸಗಿ ಮನೆ ಆವರಣದ ಬೋನ್ಸಾಯ್ ಕುಂಡ ಜೋಡಣೆ: ಪ್ರೇಮಲತಾ ಪಾಟೀಲ–ಚಾಂಪಿಯನ್‌, ಎ. ಜಾನಕಿರಾಮ, ಶಾಂತಿನಗರ–ಪ್ರಥಮ. ಖಾಸಗಿ ಮನೆ ಆವರಣದ ಜೀವವೈವಿಧ್ಯತೆಯ ತೋಟ–ಎ. ಜಾನಕಿ­ರಾಮ, ಶಾಂತಿನಗರ–ಚಾಂಪಿಯನ್‌. ಖಾಸಗಿ ಮನೆಯ ಮೇಲ್ಛಾವಣಿ ತೋಟ–ಗೌರಿ ದೇಶಪಾಂಡೆ, ಗಣೇಶ­ನಗರ–ಚಾಂಪಿಯನ್‌. ಔಷಧೀಯ ಬೆಳೆಗಳ ದೊಡ್ಡ ತೋಟ–ಡಾ. ಪಾಂಡುರಂಗ ಗಂಡಮಾಲಿ–ಪ್ರಥಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.