ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸತ್ಯಾಗ್ರಹ

ನಾಯಕನೂರ ದಲಿತರಿಗೆ ಸಾಮೂಹಿಕ ಬಹಿಷ್ಕಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 6:36 IST
Last Updated 4 ಏಪ್ರಿಲ್ 2013, 6:36 IST

ನವಲಗುಂದ: `ತಾಲ್ಲೂಕಿನ ನಾಯಕ ನೂರ ಗ್ರಾಮದಲ್ಲಿ ನಡೆದ ದಲಿತರಿಗೆ ಸಾಮೂಹಿಕ ಬಹಿಷ್ಕಾರ ಪ್ರಕರಣದಲ್ಲಿ ನೊಂದ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ಸರಕಾರ ಮೀನ ಮೇಷ ಮಾಡುತ್ತಿದೆ'  ಎಂದು ಆರೋಪಿಸಿ ರಾಜ್ಯ ಆದಿಜಾಂಬವ ಮಾದಿಗರ ಸಂಘ ಹಾಗೂ ನಾಯ್ಕನೂರ ದಲಿತ ಕುಟುಂಬ ದವರು ಬುಧವಾರ ಬೆಳಿಗ್ಗೆಯಿಂದ ತಹಶೀಲ್ದಾರ ಕಾರ್ಯಾಲಯದ ಎದುರು ಸತ್ಯಾಗ್ರಹ ನಡೆಸಿದರು.

`ನೊಂದ 34 ಕುಟುಂಬಗಳ ಸಂತ್ರಸ್ತರ ಪೈಕಿ 14 ಜನರಿಗೆ ಮಾತ್ರ ಭೂ ಒಡೆತನದ ಯೋಜನೆಯಡಿ ತಲಾ ಎರಡು ಎಕರೆ ಜಮೀನನ್ನು ಮಂಜೂರ ಮಾಡಲಾಗಿದೆ. ಉಳಿದ 24 ಕುಟುಂಬ ಗಳಿಗೆ ಜಮೀನು ಖರಿದಿಸಿ ಕೊಡುವುದಾಗಿ ಸರಕಾರ ಭರವಸೆ ಕೊಡುತ್ತಲೆ ಬಂದಿದೆ.

ಗ್ರಾಮದ ಸುತ್ತಲಿನ ಜಮೀನು ಮಾಲಿಕರು 22 ಎಕರೆ ಜಮೀನು ಮಾರಾಟ ಮಾಡಲು ಒಪ್ಪಿಗೆ ಸೂಚಿಸಿ 6 ತಿಂಗಳು ಹಿಂದೆಯೇ  ಧಾರವಾಡದಲ್ಲಿನ ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ಧಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಎಕರೆಗೆ ರೂ.3.10 ಲಕ್ಷ ಕ್ಕೆ ಒಪ್ಪಿಗೆಯನ್ನು ಕೊಟ್ಟಿದ್ದಾರೆ.  ಆದರೆ ಸಮಾಜ ಕಲ್ಯಾಣ ಇಲಾಖೆ ವಿರೋಧಿ ನೀತಿ ಅನುಸರಿಸುತ್ತಿರುವುದರಿಂದ ಸಮಸ್ಯೆ ಉಂಟಾಗಿ ಕಾಲಹರಣ ವಾಗುತ್ತಿದೆ. 

ಇದರಿಂದಾಗಿ ಜಮೀನು ಮಾಲಿಕರು ಖರೀದಿ ವಿಳಂಬ ವಾಗುತ್ತಿ ರುವುದರಿಂದ ಬೇರೆಯವರಿಗೆ ಮಾರಾಟ ಮಾಡುತ್ತೇವೆಂದು ಹೇಳುತ್ತಿದ್ದಾರೆ.   ಹೀಗಾಗಿ ಸಮಾಜ ಕಲ್ಯಾಣ ಇಲಾಖೆ ಈಗಲಾದರೂ ಮನಸ್ಸು ಮಾಡಿ ನೊಂದ ಕುಟುಂಬಕ್ಕೆ ಸಹಾಯ ಮಾಡಬೇಕು. ಇಲ್ಲವಾದಲ್ಲಿ ಅನಿರ್ಧಿಷ್ಟಾವದಿ ಸತ್ಯಾಗ್ರಹ ಮುಂದುವರಿಸಲಾಗುವುದು' ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಂಗಪ್ಪ ಮಾದರ ತಹಶೀಲ್ದಾರರಿಗೆ ನೀಡಿದ ಮನವಿಯಲ್ಲಿ  ತಿಳಿಸಿದ್ದಾರೆ.

ದೇವೆಂದ್ರಪ್ಪ ಮಾದರ, ಹನಮಂತಪ್ಪ ಕೆಳಗೇರಿ, ಶಿವರಾಯಪ್ಪ ಮಾದರ, ಶಿವಪುತ್ರಪ್ಪ ಕೆಳಗೇರಿ, ರವಿ ದೊಡ್ಡಮನಿ, ಚೆನ್ನಪ್ಪ ಚಲವಾದಿ, ಕರಿಯಪ್ಪ ದೊಡ್ಡಮನಿ, ಮಲ್ಲವ್ವ ದೊಡ್ಡಮನಿ, ರುಕ್ಮವ್ವ ದೊಡ್ಡಮನಿ, ರುಕ್ಮವ್ವ ಮಾದರ, ನೀಲಪ್ಪ ಮಾದರ, ಸಣ್ಣಕರಿಯಪ್ಪ ಮಾದರ, ನಾಗಪ್ಪ ಮಾದರ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಚುನಾವಣಾ ನೀತಿ ಸಂಹಿತೆ ಜಾರಿ ಇರುವುದರಿಂದ ಸತ್ಯಾಗ್ರಹ ಕೈಗೊಳ್ಳದಂತೆ ಪ್ರತಿಭಟನಾಕಾರರನ್ನು ಪಿಎಸ್‌ಐ ಎನ್.ಸಿ.ಕಾಡದೇವರ ಮನವೊಲಿಸಿದ ನಂತರ ಪ್ರತಿಭಟನೆ ಹಿಂತೆಗೆದುಕೊಂಡು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT