ADVERTISEMENT

ಮುಂದುವರಿದ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 6:05 IST
Last Updated 9 ಅಕ್ಟೋಬರ್ 2011, 6:05 IST

ಧಾರವಾಡ: ಇಲ್ಲಿನ ಸೂಪರ್ ಮಾರುಕಟ್ಟೆಗೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಜಾತ್ಯತೀತ ಜನತಾದಳದ ಶಹರ ಘಟಕದ ಕಾರ್ಯದರ್ಶಿ ಇಸ್ಮಾಯಿಲ್ ತಮಾಟಗಾರ ನೇತೃತ್ವದಲ್ಲಿ ನಡೆದಿರುವ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಮುಂದುವರಿದಿದೆ.

ಸತ್ಯಾಗ್ರಹದ ಅಂಗವಾಗಿ ಮಾರುಕಟ್ಟೆಯ ಕಸಗೂಡಿಸುವ ಮೂಲಕ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲಾಯಿತು.
ಮಾಜಿ ಸಚಿವ ಪಿ.ಸಿ.ಸಿದ್ಧನಗೌಡರ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ, ನಗರದ ಮಾರುಕಟ್ಟೆಗಳ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಬೇಕು ಎಂದರು.

ಎನ್.ಎಚ್.ಕೋನರಡ್ಡಿ, ವಿಜಯಲಕ್ಷ್ಮೀ ಲೂತಿಮಠ, ಅಮೃತ ದೇಸಾಯಿ, ಸುರೇಶ ಹಿರೇಮಠ, ಸರೋಜಾ ಪಾಟೀಲ, ಖಾತುನಬಿ ತಮಾಟಗಾರ, ಮೋಹನ ಅರ್ಕಸಾಲಿ, ಇಮಾಮಸಾಬ ಕುಂದಗೋಳ, ಕಮಲಾ ಹೊಂಬಳ, ಹಸನ್ ಮಣಸಗಿ, ರಫೀಕ್ ಕಿರಶಾಳ, ಎಂ.ಎಫ್.ಹಿರೇಮಠ, ಆರ್. ಬಿ.ಪಾಟೀಲ, ರಾಘವೇಂದ್ರ ಸೊಂಡೂರ, ಡಾ.    ಎನ್. ಬಿ.ಶೂರಪಾಲಿ, ರಾಜೇಶ ಹೆಬ್ಬಳ್ಳಿ ಭಾಗವಹಿಸಿದ್ದರು.

ಬೆಂಬಲ: ಉಪವಾಸ ಸತ್ಯಾಗ್ರಹಕ್ಕೆ ಕಲಾಲ ಸಮಾಜ ಮಟನ್ ವ್ಯಾಪಾರಸ್ಥರ ಸಂಘ ಬೆಂಬಲ ವ್ಯಕ್ತಪಡಿಸಿದೆ. ಮಣಿಕಿಲ್ಲಾದಲ್ಲಿರುವ ಮಟನ್ ಮಾರುಕಟ್ಟೆಗೂ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಸಂಘದ ಅಧ್ಯಕ್ಷ ಜೀವನ ಮಾನಕರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.