ADVERTISEMENT

ರಸ್ತೆ ಮೇಲೆಲ್ಲಾ ಚರಂಡಿ ನೀರು!

​ಪ್ರಜಾವಾಣಿ ವಾರ್ತೆ
Published 31 ಮೇ 2014, 5:50 IST
Last Updated 31 ಮೇ 2014, 5:50 IST
ಧಾರವಾಡದ ‘ಪ್ರಜಾವಾಣಿ ಕಚೇರಿ’ ಎದುರಿನ ಒಳಚರಂಡಿ ತುಂಬಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಸಾರ್ವಜನಿಕರು ಪರದಾಡಬೇಕಾಯಿತು.
ಧಾರವಾಡದ ‘ಪ್ರಜಾವಾಣಿ ಕಚೇರಿ’ ಎದುರಿನ ಒಳಚರಂಡಿ ತುಂಬಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಸಾರ್ವಜನಿಕರು ಪರದಾಡಬೇಕಾಯಿತು.   

ಧಾರವಾಡ: ಹತ್ತು ದಿನಗಳ ಹಿಂದೆ ಇಲ್ಲಿನ ‘ಪ್ರಜಾವಾಣಿ’ ಕಚೇರಿ ಎದುರಿನ ಒಳಚಂರಡಿ ಕೊಳವೆ ತುಂಬಿ ರಸ್ತೆಯ ಮೇಲೆಲ್ಲ ಹರಿಯುತ್ತಿರುವ ಕುರಿತು ವರದಿ ಪ್ರಕಟಿಸಲಾಗಿತ್ತು. ಕೂಡಲೇ ಎಚ್ಚೆತ್ತ ಪಾಲಿಕೆ ಸಿಬ್ಬಂದಿ ಅದನ್ನು ಸ್ವಚ್ಛಗೊಳಿಸಿ ಅದರಿಂದ ಸಾರ್ವಜನಿ ಕರಿಗೆ ಆಗುತ್ತಿದ್ದ ಕಿರಿಕಿರಿಗೆ ಮುಕ್ತಿ ಹಾಡಿತ್ತು.

ಆದರೆ ಕಳೆದ ನಾಲ್ಕು ದಿನಗಳಿಂದ ಮತ್ತೇ ಅದರ ಪಕ್ಕದಲ್ಲಿರುವ ಇನ್ನೊಂದು ಒಳಚರಂಡಿ ಪೈಪ್‌ ತುಂಬಿ ರಸ್ತೆಯ ಮೇಲೆಲ್ಲ ಚರಂಡಿ ನೀರು ಹರಿಯುತ್ತಿದೆ. ಅದರಿಂದ ಹೊರಡು ತ್ತಿರುವ ಕೆಟ್ಟ ವಾಸನೆಯಿಂದಾಗಿ ಸಾರ್ವಜನಿಕರು ಮೂಗು ಮುಚ್ಚಿ ಕೊಂಡು ಓಡಾಡುವ ಸ್ಥಿತಿ ನಿರ್ಮಾಣ ವಾಗಿದೆ. ರಸ್ತೆ ದಾಟುವ ಪಾದಚಾರಿ ಗಳು ಕೊಳಚೆ ನೀರಿನಲ್ಲಿಯೇ ನಡೆದು ದಾಟಬೇಕಾದ ಅನಿವಾರ್ಯತೆ ಇದೆ. ದಿನವಿಡೀ ಸ್ಥಳಿಯರು ಪರದಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.