ADVERTISEMENT

ಸಮೂಹ ಗಾಯನ: ಕೆಎಲ್‌ಇ ಶಾಲೆಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 3:30 IST
Last Updated 16 ಸೆಪ್ಟೆಂಬರ್ 2011, 3:30 IST

ಹುಬ್ಬಳ್ಳಿ: ನಗರದ ಕೆಎಲ್‌ಇ ಸಂಸ್ಥೆಯ ಮಂಜುನಾಥನಗರ ಇಂಗ್ಲಿಷ್ ಮಾಧ್ಯಮ ಶಾಲೆಯ ತಂಡ ಕಾಡಸಿದ್ದೇಶ್ವರ ಕಲಾ ಹಾಗೂ ಎಚ್.ಎಸ್. ಕೋತಂಬ್ರಿ ವಿಜ್ಞಾನ ಕಾಲೇಜಿನ ವತಿಯಿಂದ ಹಿಂದಿ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮೂಹ ಗಾಯನ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿದೆ.

ಜೆ.ಕೆ. ಪ್ರೌಢಶಾಲೆ ದ್ವಿತೀಯ ಹಾಗೂ ಚೇತನಾ ಪಬ್ಲಿಕ್ ಶಾಲೆ ತೃತೀಯ ಸ್ಥಾನ ಪಡೆದಿವೆ. ಪಿಯು ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ `ಸಂಪರ್ಕ ಭಾಷಾ ಹಿಂದಿ~ ಭಾಷಣ ಸ್ಪರ್ಧೆಯಲ್ಲಿ ಪ್ರೇರಣಾ ಪಿಯು ಕಾಲೇಜಿನ ಪಲ್ಲವಿ ಕೊಂಗಿ ಪ್ರಥಮ, ಎಸ್‌ಜೆಎಂವಿ ಮಹಿಳಾ ಕೇಲಜಿನ ಪ್ರಿಯಾ ಸರಾಫ್ ದ್ವಿತೀಯ ಹಾಗೂ ಜೈನ್ ಕಾಲೇಜಿನ ಡೊಳ್ಳಿ ಎಸ್. ತಟ್ಟೇದ ತೃತೀಯ ಸ್ಥಾನ ಗಳಿಸಿದ್ದಾರೆ.

ಪದವಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ `ಭ್ರಷ್ಟಾಚಾರ ಕಾ ನಿರ್ಮೂಲನ~ ಭಾಷಣ ಸ್ಪರ್ಧೆಯಲ್ಲಿ ಎಸ್‌ಜೆಎಂವಿ ಕಾಲೇಜಿನ ಪೂರ್ಣಿಮಾ ಖಂಡಾಟೆ ಪ್ರಥಮ, ಕಾಡಸಿದ್ದೇಶ್ವರ ಕಾಲೇಜಿನ ನಮ್ರತಾ ನಾಯಕ ಮತ್ತು ನೆಹರೂ ಕಾಲೇಜಿನ ಆಯಾಜಹ್ಮದ್ ಪಂಜಿಗರ್ ದ್ವಿತೀಯ ಮತ್ತು ಜೆ.ಜಿ. ಕಾಲೇಜಿನ ಬೀನಾ ವರ್ಮಾ ತೃತೀಯ ಸ್ಥಾನ ಪಡೆದಿದ್ದಾರೆ.

ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸೌಭಾಗ್ಯಲಕ್ಷ್ಮಿ ಆರೇರ ಮತ್ತು ಇಸ್ಮಾಯಿಲ್ ಮೀರ್‌ಜಮಾದಾರ್ ಕ್ರಮವಾಗಿ ಮೊದಲ ಎರಡು ಸ್ಥಾನ ಗಳಿಸಿದ್ದಾರೆ.

ಪತ್ರಕರ್ತ ಭರಮಾ ಕೋಲೇಕರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಫಿರೋಜ್ ಬಾಲಸಿಂಗ್ ಹಿಂದಿ ಭಾಷೆಯ ಮಹತ್ವದ ಬಗೆಗೆ ಮಾತನಾಡಿದರು.ಪದವಿ ವಿಭಾಗದ ಪ್ರಾಚಾರ್ಯರಾದ ಪ್ರೊ. ವಿ.ಎಂ. ಕಿಣಗಿ ಅಧ್ಯಕ್ಷತೆ ವಹಿಸಿದ್ದರು. ಪಿಯು ವಿಭಾಗದ ಪ್ರಾಚಾರ್ಯ ಪ್ರೊ.ಪಿ.ಜಿ. ಪಾಟೀಲ, ಪ್ರೊ.ಎಸ್.ಎಸ್. ನವಲಗುಂದ, ಪ್ರೊ.ಎ.ಬಿ. ಮೇಟಿ, ಡಾ.ವಿ.ಜಿ. ಹಿರೇಮಠ, ಶೋಭಾ ಲೋಹಾರ, ಚಂದ್ರಶೇಖರ ಜಾಡರ ಡಾ. ವಿದ್ಯಾವತಿ ರಜಪೂತ, ಸೋನಂ ಪಾಂಡೆ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.