ಕುಂದಗೋಳ: ರೈತರ ಜಾನುವಾರಗಳಿಗೆ ಮೇವಿನ ಕೊರತೆ ಉಂಟಾಗಿದೆ. ದನಗಳು ಕಸಾಯಿಖಾನೆಗೆ ಹೋಗುತ್ತಿವೆ. ರೈತರು ಬಡ ಕೂಲಿಕಾರರು ಗೂಳೆ ಹೋಗುತ್ತಿ ದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಮುಖಂಡರು ಖುರ್ಚಿಗಾಗಿ ಕಚ್ಚಾ ಡುತ್ತಿದ್ದಾರೆ.
ತಮ್ಮ ಸ್ವಾರ್ಥದಲ್ಲಿ ಮುಳಿಗಿದ್ದಾರೆ. ಕೂಡಲೇ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ರಾಜ್ಯಪಾಲರಿಗೆ ಮಾಜಿ ಶಾಸಕ ಸಿ.ಎಸ್. ಶಿವಳ್ಳಿ ಆಗ್ರಹಿಸಿದರು.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸೋಮವಾರ ಪ್ರತಿಭಟನಾರ್ಥ ಹಮ್ಮಿ ಕೊಂಡಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಹದಗೆಟ್ಟು ಹೋಗಿದೆ. ಅಧಿಕಾರಿಗಳು ಜನರ ಸಮಸ್ಯೆ ಗಳನ್ನು ಆಲಿಸುತ್ತಿಲ್ಲ. ಪ್ರಸಕ್ತ ಮುಂಗಾರು ದುರ್ಬಲವಾಗಿದೆ. ಅದಕ್ಕೆ ಪರಿಹಾರ ನೀಡುವ ಕಾರ್ಯ ಮಾಡುತ್ತಿಲ್ಲ ಎಂದು ದೂರಿದರು.
ರೈತರ ಬೆಳೆಸಾಲ ಮನ್ನಾ ಮಾಡ ಬೇಕು. ಬಡವರ ಮನೆಯ ಭಾಗ್ಯಜ್ಯೋತಿ ಬಿಲ್ಲು ಮನ್ನಾ ಮಾಡಬೇಕು. ಕೊಳವೆಭಾವಿವುಳ್ಳ ರೈತರ ವಿದ್ಯುತ್ತ ಬಾಕಿ ಮನ್ನಾ ಮಾಡಬೇಕು. ಬರಗಾಲ ಕಾಮಗಾರಿ ಕೂಲಿಗಾಗಿ ಕಾಳು ಗ್ರಾಮ ಮಟ್ಟದಲ್ಲಿ ನೀಡಬೇಕು. ಪ್ರತಿ ಗ್ರಾಮ ಪಂಚಾಯ್ತಿಗೆ ಗೋಶಾಲೆ ಆರಂಭಿಸಬೇಕು. ರೈತರಿಗೆ ಬೀಜ ಗೊಬ್ಬರ ಉಚಿತವಾಗಿ ನೀಡಬೇಕು ಎಂದು ಶಿವಳ್ಳಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿ.ಪಂ. ಸದಸ್ಯ ವೆಂಕನಗೌಡ್ರ ಹಿರೇಗೌಡ್ರ, ಅರವಿಂದ ಕಟಗಿ, ದಯಾನಂದ ಕುಂದೂರ, ಅಜ್ಜಪ್ಪ ಕುಡವಕ್ಕಲ, ಬಸವರಾಜ ಶಿರ ಸಂಗಿ, ಅಪ್ಪಣ್ಣ ಹಿರೇಗೌಡ್ರ, ಉಮೇಶ ಹೆಬ ಸೂರ, ಅಜೀಜ್ ಕ್ಯಾಲಕೊಂಡ, ಸಕ್ರಪ್ಪ ಲಮಾಣಿ, ಮಂಜುನಾಥಗೌಡ್ರ ಮತ್ತಿತ ರರು ಭಾಗವಹಿಸಿದ್ದರು.
ಗಾಳಿಮರೆಮ್ಮಾ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ರಾಜ್ಯಪಾಲರು ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಿ ತಹಶೀಲ್ದಾರ ಮುಖಾಂತರ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.