ಧಾರವಾಡ: “ಸ್ವಂತ ಉದ್ದಿಮೆ ಪ್ರಾರಂಭಿಸಿ ನಿಮಗೆ ನೀವೇ ನಾಯಕರಾಗಿ ಮತ್ತು ಸಾಕಷ್ಟು ಜನರಿಗೆ ಉದ್ಯೋಗ ಕೊಡಿ. ಅದರಿಂದ ದೇಶದ ಬೆಳವಣಿಗೆಯಲ್ಲಿ ನಿಮ್ಮ ಪಾಲು ನೀಡಿದಂತಾಗುತ್ತದೆ” ಎಂದು ಸಣ್ಣ ಮತ್ತು ಸೂಕ್ಷ್ಮ ಮಾಧ್ಯಮ ಸಂಸ್ಥೆಯ ನಿರ್ದೇಶಕ ಜಿ.ಆರ್.ಅಕಾದಾಸ್ ಹೇಳಿದರು. ಇಲ್ಲಿನ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಣ್ಣ ಮತ್ತು ಸೂಕ್ಷ್ಮ ಮಾಧ್ಯಮ ಸಂಸ್ಥೆ, ಎಂ ಟೆಕ್ ಕಂ್ಪಯೂಟರ್ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವ್ಯವಹಾರ ಕೌಶಲ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದಿಂದ ಸಾಕಷ್ಟು ಸವಲತ್ತುಗಳಿದ್ದು, ಸಣ್ಣ ಉದ್ದಿಮೆದಾರರು ಅವುಗಳ ಪ್ರಯೋಜನ ಪಡೆಯಬೇಕು. ಹೊಸ ಆವಿಷ್ಕಾರದತ್ತ ಗಮನಹರಿಸಬೇಕು ಎಂದರು. ‘ಶೈಕ್ಷಣಿಕ ಜ್ಞಾನದ ಜೊತೆಗೆ ವ್ಯವಹಾರಿಕ ಜ್ಞಾನವು ಅತ್ಯಂತ ಮಹತ್ವದ್ದು. ಈಗ ಉದ್ದಿಮೆಗಳಿಗೆ ವಿಶ್ವವೇ ಒಂದು ಮಾರುಕಟ್ಟೆಯಾಗಿದ್ದು, ವಿಪುಲ ಅವಕಾಶಗಳಿವೆ. ಇದರ ಜೊತೆಗೆ ಸವಾಲುಗಳು ಸಹ ಸಾಕಷ್ಟು ಇವೆ. ಅವುಗಳನ್ನು ಎದುರಿಸಿ ಸಾಧನೆಗೈಯಲು ಇಂಥ ಕಾರ್ಯಕ್ರಮಗಳ ಸದುಪಯೋಗ ಪಡೆಯಬೇಕು’ ಎಂದು ಪ್ರಾಚಾರ್ಯ ಎ.ವಿ.ಶಿವಪುರ ಹೇಳಿದರು.
ಎಂ ಟೆಕ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ನಾರಾಯಣ ಮಾನೆ, ಹರ್ಷವರ್ಧನ ನಾಯಕ, ಮಹೇಂದ್ರಕರ, ಸದಾಶಿವ ಪರೇಟ್ ಉಪಸ್ಥಿತರಿದ್ದರು. ಉದಯಕುಮಾರ ಹಕಾರೆ ಸ್ವಾಗತಿಸಿ, ವಂದಿಸಿದರು. ಶಶಿಕಾಂತ ಕುಲಕರ್ಣಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.