ಧಾರವಾಡ: ಹಾಡುಹಗಲೇ ಎರಡು ಮನೆಯಗಳನ್ನು ದೋಚಿರುವ ಕಳ್ಳರು ಲಕ್ಷಾಂತರ ರೂಪಾಯಿಗಳ ಮೌಲ್ಯದ ಚಿನ್ನಾಭರಣ ಅಪಹರಿಸಿದ ಘಟನೆ ಶುಕ್ರವಾರ ಇಲ್ಲಿಯ ಬಸವನಗರದಲ್ಲಿ ನಡೆದಿದೆ.
ಬಸವನಗರದ ನಿವಾಸಿಯಾದ ಸಂಗಮ್ಮ ಚಲವಾದಿ ಎಂಬುವವರು ಅಂಚೆ ಕಚೇರಿಯಲ್ಲಿ ಕೆಲಸ ಮಾಡು ತ್ತಿದ್ದರು. ಅವರು ಕೆಲಸಕ್ಕೆ ಹೋದ ಸಂದರ್ಭ ದಲ್ಲಿ ಕೀಲಿ ಮುರಿದು ಒಳನುಗ್ಗಿದ ಕಳ್ಳರು ಸುಮಾರು 1 ಲಕ್ಷ 30 ಸಾವಿರ ರೂಪಾಯಿ ಮೌಲ್ಯವುಳ್ಳ ಚಿನ್ನಾಭರಣ ದೋಚಿದ್ದಾರೆ.
ಅದೇ ನಗರದಲ್ಲಿರುವ ದುಂಡಪ್ಪಾ ಎಂಬುವರು ಕೆಲಸಕ್ಕೆ ತೆರಳಿದ ಸಂದರ್ಭ ದಲ್ಲಿ ಮನೆಯಲ್ಲಿ ಯಾರು ಇಲ್ಲದ ಸಮಯ ಸದುರುಪ ಯೋಗಪಡಿಸಿ ಕೊಂಡ ಕಳ್ಳರು ಮನೆಯ ಬೀಗ ಮುರಿದು ಒಳ ನುಗ್ಗಿ ಆ ಮನೆಯಲ್ಲಿಯೂ ಸುಮಾರು 39 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಗಳನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳರ ಪತ್ತೆಗಾಗಿ ಶೋಧ ಕಾರ್ಯ ನಡೆದಿದೆ. ಎಂದು ಪೊಲೀಸರು ತಿಳಿಸಿದ್ದಾರೆ. ಈ ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎರಡು ದೂರುಗಳು ಉಪನಗರ ಠಾಣೆಯಲ್ಲಿ ದಾಖಲಾಗಿದೆ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಕಳ್ಳರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.