ADVERTISEMENT

ಹುಬ್ಬಳ್ಳಿ-ನವದೆಹಲಿ ರೈಲು ಆರಂಭಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 5:50 IST
Last Updated 12 ಜನವರಿ 2012, 5:50 IST

ಹುಬ್ಬಳ್ಳಿ: ಪ್ರಯಾಣಿಕರ ದಟ್ಟಣಿ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ನವದೆ ಹಲಿಗೆ ನೂತನ ಎಕ್ಸ್‌ಪ್ರೆಸ್ ರೈಲನ್ನು ಆರಂಭಿಸಬೇಕು ಎಂದು ವಿಭಾಗೀಯ ರೈಲ್ವೆ ಬಳಕೆದಾರರ ಸಮಿತಿಯ ಮಾಜಿ ಸದಸ್ಯ ಮಹೇಂದ್ರ ಸಿಂಘಿ ಅವರ ನೇತೃತ್ವದ ನಿಯೋಗವು ನೈರುತ್ಯ ರೈಲ್ವೆಯ ನೂತನ ಪ್ರಧಾನ ವ್ಯವಸ್ಥಾಪಕ ಅಶೋಕಕುಮಾರ್ ಮಿತ್ತಲ್ ಅವರಿಗೆ ಮನವಿ ಮಾಡಿದೆ.

ಸೋಮವಾರ ಮಿತ್ತಲ್ ಅವರನ್ನು ಭೇಟಿಯಾದ ನಿಯೋಗವು ಹಲವು ಬೇಡಿಕೆಗಳುಳ್ಳ ಮನವಿ ಪತ್ರವನ್ನು ಸಲ್ಲಿ ಸಿತು. ಉತ್ತರ ಕರ್ನಾಟಕದ ಜನತೆ ನವ ದೆಹಲಿಗೆ ತೆರಳಲು ಇನ್ನೊಂದು ರೈಲು ಅಗತ್ಯವಿದ್ದು, ಕೂಡಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಅಲ್ಲದೇ, ಹುಬ್ಬಳ್ಳಿ-ಮುಂಬೈ ನಗರಗಳ ಮಧ್ಯೆ ಸಂಜೆ ಹೊರಟು ಬೆಳಿಗ್ಗೆ ತಲುಪುವ ರೈಲನ್ನು ಹೊಸದಾಗಿ ಆರಂಭಿಸಬೇಕು. ಈಗ ಯಶವಂತ ಪುರ-ದಾದರ್ ಚಾಲುಕ್ಯ ಎಕ್ಸ್‌ಪ್ರೆಸ್ ರೈಲು ಮಾತ್ರ ಮುಂಬೈಗೆ ತೆರಳುತ್ತಿದ್ದು, ಈ ಭಾಗದ ಪ್ರಯಾಣಿಕರಿಗೆ ಸೀಟುಗಳ ಲಭ್ಯತೆ ಕಡಿಮೆ ಇದೆ. ಈ ಪರಿಸ್ಥಿತಿ ಯನ್ನು ಮನಗಂಡು ಹೊಸ ರೈಲು ಆರಂಭಿಸಬೇಕು. ವಾರದಲ್ಲಿ ಎರಡು ಬಾರಿ ಸಂಚರಿಸುವ `ಸಂಪರ್ಕ ಕ್ರಾಂತಿ~ ರೈಲನ್ನು ಪ್ರತಿದಿನವೂ ಓಡಿಸಬೇಕು.

ಅಹ್ಮದಾಬಾದ್-ಪುಣೆ ಅಹಿಂಸಾ ರೈಲನ್ನು ಹುಬ್ಬಳ್ಳಿಯವರೆಗೆ ವಿಸ್ತರಿಸ ಬೇಕು. ವಾರದಲ್ಲಿ ಎರಡು ದಿನ ಸಂಚರಿಸುವ ಕೊಲ್ಹಾಪುರ- ಹುಬ್ಬಳ್ಳಿ- ಹೈದರಾಬಾದ್ ರೈಲನ್ನು ಪ್ರತಿದಿನ ಹಾಗೂ ಕಾಚೆಗುಡ-ಗುಂತಕಲ್-ಹುಬ್ಬಳ್ಳಿ ರೈಲಿಗೆ ಹೆಚ್ಚುವರಿ ಬೋಗಿ ಗಳನ್ನು ಅಳವಡಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.

ಚೆನ್ನೈ-ವಾಸ್ಕೋ ವಾರದ ರೈಲನ್ನು ಪ್ರತಿದಿನ ಓಡಿಸಲು ಕ್ರಮ ಕೈಗೊಳ್ಳ ಬೇಕು ಹಾಗೂ ಬಹು ದಿನಗಳ ಬೇಡಿಕೆಯಾಗಿರುವ ಧಾರವಾಡ- ಮೈಸೂರು ರೈಲಿಗೆ `ಸಿದ್ಧಾರೂಢ ಎಕ್ಸ್‌ಪ್ರೆಸ್~ ಎಂದು ಹೆಸರಿಡಬೇಕು ಬಗ್ಗೆಯೂ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.