ADVERTISEMENT

ಮಿಲ್ಲತ್ ಸೌಹಾರ್ದ ಸಹಕಾರಿ ‘ಶೇ 10ರಷ್ಟು ಲಾಭಾಂಶ ಘೋಷಣೆ’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 4:02 IST
Last Updated 26 ಸೆಪ್ಟೆಂಬರ್ 2022, 4:02 IST
ಅಳ್ನಾವರದ ಮಿಲ್ಲತ್ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಆರ್.ಎಂ. ಬಾಗವಾನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಿದರು
ಅಳ್ನಾವರದ ಮಿಲ್ಲತ್ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಆರ್.ಎಂ. ಬಾಗವಾನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಿದರು   

ಅಳ್ನಾವರ: ಗ್ರಾಮೀಣ ಸಮುದಾಯಕ್ಕೆ ಸಕಾಲದಲ್ಲಿ ಸಾಲ ಸೌಲಭ್ಯ ನೀಡಿ ಅವರ ಬದುಕು ಸುಧಾರಿಸುವ ಧ್ಯೇಯದೊಂದಿಗೆ ಆರಂಭವಾದ ಇಲ್ಲಿನ ಮಿಲ್ಲತ್ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆ ಆರ್ಥಿಕವಾಗಿ, ಸಾಮಾಜಿಕವಾಗಿ, ಸದೃಢತೆ ಸಾದಿಸಿ ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷ ಆರ್. ಎಂ. ಬಾಗವಾನ ಹೇಳಿದರು.

ಇಲ್ಲಿನ ಎಪಿಎಂಸಿ ಆವರಣದಲ್ಲಿ ನಡೆದ ಮಿಲ್ಲತ್ ಸೌಹಾರ್ದ ಸಹಕಾರಿ ನಿಯಮಿತ್‌ದ 14ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೀಡಿ ಮತ್ತು ಧಾರವಾಡದಲ್ಲಿ ಶಾಖಾ ಕಚೇರಿ ಆರಂಬಿಸಿದ್ದು ಅಲ್ಲಿ ಉತ್ತಮ ವ್ಯವಹಾರ ನಡೆದಿದೆ ಎಂದರು.
ಸಹಕಾರಿಯು ಆರ್ಥಿಕ ವರ್ಷದಲ್ಲಿ ₹46.41 ಲಕ್ಷ ಲಾಭ ಗಳಿಸಿ ಸದಸ್ಯರಿಗೆ ಶೇ 10 ರಷ್ಟು ಲಾಭಾಂಶ ಹಂಚಲು ನಿರ್ಧರಿಸಿದೆ.
ಹಾಪೀಜ್ ಮೊಹ್ಮದಹುಸೇನ ಬಸ್ಸಾಪೂರ ಪ್ರಾರ್ಥಿಸಿದರು. ಎ.ಎ. ಬಾಗೇವಾಡಿ ಸಭೆಯ ಕಾರ್ಯಸೂಚಿ ಮಂಡಿಸಿದರು. ಉಪಾಧ್ಯಕ್ಷ ಎಂ.ಎಂ. ತೇಗೂರ, ನಿರ್ದೇಶಕರಾದ ಎ.ಎಂ. ನಿಚ್ಚಣಕಿ, ಅನ್ವರಖಾನ ಬಾಗೇವಾಡಿ, ಎ.ಎ. ಬಾಗೇವಾಡಿ, ಎಂ.ಕೆ. ಬಾಗವಾನ, ಎಂ.ಎಂ. ಖಾಜಿ, ಮುಕ್ತುಂ ಹುದ್ಲಿ, ಹಸನಅಲಿ ಶೇಖ, ಬಿ.ಡಿ. ದಾಸ್ತಿಕೊಪ್ಪ, ಚಂದ್ರು ಭೋವಿ, ಪುಂಡಲಿಕ ಮುನವಳ್ಳಿ, ಡಿ.ಕೆ ಮುನವಳ್ಳಿ, ಎಫ್, ತೇರಗಾಂವ ಇದ್ದರು.

ಮುಖ್ಯ ಕಾರ್ಯ ನಿರ್ವಾಹಕ ಫಯಾಜಅಹ್ಮದ ಅಂಕಲಗಿ ಹಿಂದಿನ ಮಹಾಸಭೆಯ ಠರಾವು ಓದಿದರು, ಶಾನೂರಬಾಬಾ ಕಂಬಳಿ ಅಢಾವೆ ಪತ್ರಿಕೆ ಮಂಡಿಸಿದರು. ಹಸನಅಲಿ ಶೇಖ ನಿರೂಪಿಸಿದರು. ಅನ್ವರಖಾನ ಬಾಗೇವಾಡಿ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.