ADVERTISEMENT

ಯುವಕರ 5,800 ಕಿ.ಮೀ ಬೈಕ್ ರ‍್ಯಾಲಿ ಆರಂಭ

ಭಯೋತ್ಪಾದಕರಿಗೆ ಧರ್ಮವಿಲ್ಲ ಸಂದೇಶ ಸಾರುವ ಉದ್ದೇಶ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 15:51 IST
Last Updated 6 ಮಾರ್ಚ್ 2019, 15:51 IST
ಮೊಹ್ಮದ್ ಹುಸೇನ್ ಹಾಜಿ ಹಾಗೂ ಸುನಿಲ್ ಮರಾಠೆ ಅವರ ಬೈಕ್‌ ರ‍್ಯಾಲಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ಹಾಗೂ ಬಂಗಾರೇಶ್ ಹಿರೇಮಠ ಚಾಲನೆ ನೀಡಿದರು
ಮೊಹ್ಮದ್ ಹುಸೇನ್ ಹಾಜಿ ಹಾಗೂ ಸುನಿಲ್ ಮರಾಠೆ ಅವರ ಬೈಕ್‌ ರ‍್ಯಾಲಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ಹಾಗೂ ಬಂಗಾರೇಶ್ ಹಿರೇಮಠ ಚಾಲನೆ ನೀಡಿದರು   

ಹುಬ್ಬಳ್ಳಿ: ಭಯೋತ್ಪಾದಕರಿಗೆ ಧರ್ಮವಿಲ್ಲ ಹಾಗೂ ಶಾಂತಿ– ಸೌಹಾರ್ದತೆ ಸಂದೇಶ ಸಾರಲು ರಾಮದುರ್ಗದ ಮೊಹ್ಮದ್ ಹುಸೇನ್ ಹಾಜಿ ಸೇರಿದಂತೆ ನಾಲ್ವರು ಯುವಕರು ನಡೆಸುತ್ತಿರುವ ಆರು ರಾಜ್ಯಗಳ 5,800 ಕಿ.ಮೀ ಬೈಕ್‌ ರ‍್ಯಾಲಿ ನಗರದ ಚನ್ನಮ್ಮ ವೃತ್ತದಿಂದ ಬುಧವಾರ ಆರಂಭವಾಯಿತು.

ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ಹಾಗೂ ಬಂಗಾರೇಶ್ ಹಿರೇಮಠ ರ‍್ಯಾಲಿಗೆ ಬುಧವಾರ ಚಾಲನೆ ನೀಡಿದರು. ಸುನಿಲ್ ಮರಾಠೆ, ಇಮ್ರಾನ್‌ ರಾಣೆಬೆನ್ನೂರು ಹಾಗೂ ಇರ್ಫಾನ್ ಪಠಾಣ್ ತಂಡದ ಇತರ ಸದಸ್ಯರಾಗಿದ್ದು, ಎರಡು ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಸಾಗಲಿದ್ದಾರೆ. ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ದೆಹಲಿಯನ್ನು ಅವರು ಕ್ರಮಿಸಲಿದ್ದಾರೆ.

ದಾರಿ ಮಧ್ಯೆ ಸಿಗುವ ಪ್ರಮುಖ ಊರುಗಳು ಹಾಗೂ ಧಾರ್ಮಿಕ ಕೇಂದ್ರಗಳ ಬಳಿ ಅವರು ಸಾರ್ವಜನಿಕರೊಂದಿಗೆ ಮಾತನಾಡಿ, ರ‍್ಯಾಲಿಯ ಉದ್ದೇಶ ತಿಳಿಸಲಿದ್ದಾರೆ. ಇಮ್ರಾನ್‌ ರಾಣೆಬೆನ್ನೂರು ಹಾಗೂ ಇರ್ಫಾನ್ ಪಠಾಣ್ ಧಾರವಾಡದಿಂದ ರ‍್ಯಾಲಿ ಆರಂಭಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.