ADVERTISEMENT

ಜನಪದ ಉಳಿವಿಗೆ ಹೊಸ ಯೋಜನೆ ಅಗತ್ಯ: ಜಾನಪದ ತಜ್ಞ ರಾಮು ಮೂಲಗಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 5:23 IST
Last Updated 10 ಡಿಸೆಂಬರ್ 2025, 5:23 IST
<div class="paragraphs"><p>ಹುಬ್ಬಳ್ಳಿ ತಾಲ್ಲೂಕಿನ ವರೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮೂಲ ಜನಪದ ತರಬೇತಿ ಶಿಬಿರದಲ್ಲಿ ಗ್ರಾಮೀಣ ಮಹಿಳೆಯರು ಭಾಗವಹಿಸಿದ್ದರು</p></div>

ಹುಬ್ಬಳ್ಳಿ ತಾಲ್ಲೂಕಿನ ವರೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮೂಲ ಜನಪದ ತರಬೇತಿ ಶಿಬಿರದಲ್ಲಿ ಗ್ರಾಮೀಣ ಮಹಿಳೆಯರು ಭಾಗವಹಿಸಿದ್ದರು

   

ಹುಬ್ಬಳ್ಳಿ: ‘ಮೂಲ ಜನಪದದಲ್ಲಿ ಹೊಸತನ ಹುಡುಕುವ ಮೂಲಕ ನಮ್ಮ ಜನಪದ ಜನಪರಂಪರೆಯ ನಿರ್ಮಾಣಕ್ಕಾಗಿ ನಾವೆಲ್ಲರೂ ಕಾರ್ಯನಿರ್ವಹಿಸಿಕೊಂಡು ಹೋಗಬೇಕಾಗಿದೆ’ ಎಂದು ಜಾನಪದ ತಜ್ಞ ರಾಮು ಮೂಲಗಿ ಹೇಳಿದರು.

ತಾಲ್ಲೂಕಿನ ವರೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಸಂಗ್ರಾಮ ಸೇನೆ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮೂಲ ಜನಪದ ತರಬೇತಿ ಶಿಬಿರದಲ್ಲಿ ಮಾತನಾಡಿದರು.

ADVERTISEMENT

‘ಧಾರವಾಡ ಜಿಲ್ಲೆಯ ಮೂಲ ಜನಪದ ಸಾಹಿತ್ಯದಲ್ಲಿ ರಂಗಭೂಮಿ, ದೊಡ್ಡಾಟ, ಸಣ್ಣಾಟ, ಭಜನೆ, ಹಂತಿಪದ, ರಾಶಿಪದ, ಬೀಸುಕಲ್ಲ ಪದ, ಸೋಬಾನೆ ಪದ ಇವೆಲ್ಲವೂ ಹಬ್ಬ ಹರಿದಿನಗಳಲ್ಲಿ ಹಳ್ಳಿ ಜನರ ಬದುಕಿನಲ್ಲಿ ಸಂಭ್ರಮ ತರುವ ಕಲೆಗಳಾಗಿದ್ದವು’ ಎಂದರು.

‘ಜನಪದ ಉಳಿವಿಗಾಗಿ ಮಕ್ಕಳಿಗೆ ಮತ್ತು ಮಹಿಳೆಯರಿಗಾಗಿ ತರಬೇತಿ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ. ದೇಶದ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಸಮಾಜದ ಯುವ ಸಮೂಹದಲ್ಲೂ ಜನಪದ ಉಳಿವಿಗಾಗಿ ಹೊಸ ಯೋಜನೆ ರೂಪಿಸೋಣ’ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ದೊಡ್ಡಾಟ ಕಲಾವಿದ ಫಕೀರಪ್ಪ ನೆರ್ತಿ ಮಾತನಾಡಿ, ‘ಶಾಲೆ ಹಾಗೂ ಕಾಲೇಜು ಶಿಕ್ಷಣ ಪಡೆಯುವುದರ ಜೊತೆಯಲ್ಲೇ ಮಕ್ಕಳು ಮತ್ತು ಯುವಜನಾಂಗವೆಲ್ಲ ಜನಪದ ಕಲೆಗಳನ್ನು ರೂಢಿಸಿಕೊಳ್ಳಬೇಕು. ಯಾವುದೇ ಉದ್ಯೋಗಕ್ಕೆ ಸೇರ್ಪಡೆಯಾದರೂ ಜನಪದ ಕಲೆ ಉಳಿವಿಗಾಗಿ ಏನಾದರೂ ಕೊಡುಗೆ ನೀಡುತ್ತಾ ಮುಂದುವರಿಯಲು ಸಾಧ್ಯವಿದೆ’ ಎಂದರು.

‘ಸಂಗ್ರಾಮ ಸೇನೆಯು ಕನ್ನಡಪರ ಅಷ್ಟೇ ಅಲ್ಲದೆ ಸಾಂಸ್ಕೃತಿಕ, ಕ್ರಿಯಾತ್ಮಕವಾದ ರಂಗಭೂಮಿ ಮತ್ತು ಸಾಹಿತ್ಯಿಕ ಚಟುವಟಿಕೆಗಳನ್ನು ಸಕ್ರಿಯವಾಗಿ ನಡೆಸುತ್ತಾ ಬಂದಿದೆ. ನಾಡಿನೆಲ್ಲೆಡೆ ಸಾಂಸ್ಕೃತಿಕ ಚಟುವಟಿಕೆಯಿಂದ ಹೆಸರು ಪಡೆದಿದೆ. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವಿದ್ಯಾರ್ಥಿನಿಯರಿಗಾಗಿ ಮಹಿಳೆಯರಿಗೆ ಮೂಲ ಜನಪದ ಕಲಿಯುವ ಆಸಕ್ತಿ ಮೂಡಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಿದೆ’ ಎಂದು ಹೇಳಿದರು.

ತರಬೇತಿ ಶಿಬಿರದಲ್ಲಿ ಜನಪದ ಕೋಲಾಟ ತಂಡ, ಸೋಬಾನೆ ಹಾಡಿನ ತಂಡ, ಜಾನಪದ ತಂಡದವರು ಭಾಗವಹಿಸಿದ್ದರು.

ವರೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮವ್ವ ಮ್ಯಾಗಡಿ, ರತ್ನಮ್ಮ ಗಿಡ್ಡವಿರಣ್ಣವರ, ರತ್ನ ಮಲಗೌಡ್ರ, ಎಸ್‌ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಹಾಗೂ ಶಾಲೆಯ ಮುಖ್ಯಶಿಕ್ಷಕ ಅನಿಲ ಮುರಗಿ, ಮಂಜೂಳಾ ಮುರ್ಖಾನಿ ಶಿಕ್ಷಕರು, ಸಹ ಶಿಕ್ಷಕರು ಭಾಗವಹಿಸಿದ್ದರು. ಸಂಗ್ರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸಂಜೀವ ದುಮಕನಾಳ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.