ADVERTISEMENT

ಗುಡಗೇರಿ: ಆಕಸ್ಮಿಕ ಬೆಂಕಿಗೆ ಮೆಕ್ಕೆಜೋಳ ಭಸ್ಮ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 7:26 IST
Last Updated 14 ಫೆಬ್ರುವರಿ 2026, 7:26 IST
ಗುಡಗೇರಿ - ಪಶುಪತಿಹಾಳ ರಸ್ತೆಯಲ್ಲಿ ಚಂದ್ರಶೇಖರ ಮಳಲಿ ಅವರ ಹೊಲದಲ್ಲಿ ಮೆಕ್ಕೆಜೋಳ ರಾಶಿಗೆ ಆಕಸ್ಮಿಕ ಬೆಂಕಿಯನ್ನು ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುತ್ತಿರುವುದು ಬೆಂಕಿಯನ್ನು ನಂದಿಸುತ್ತಿರುವುದು
ಗುಡಗೇರಿ - ಪಶುಪತಿಹಾಳ ರಸ್ತೆಯಲ್ಲಿ ಚಂದ್ರಶೇಖರ ಮಳಲಿ ಅವರ ಹೊಲದಲ್ಲಿ ಮೆಕ್ಕೆಜೋಳ ರಾಶಿಗೆ ಆಕಸ್ಮಿಕ ಬೆಂಕಿಯನ್ನು ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುತ್ತಿರುವುದು ಬೆಂಕಿಯನ್ನು ನಂದಿಸುತ್ತಿರುವುದು   

ಗುಡಗೇರಿ: ಪಶುಪತಿಹಾಳ ರಸ್ತೆಯಲ್ಲಿರುವ ಚಂದ್ರಶೇಖರ ಬಸವರಾಜ ಮಳಲಿ ಅವರ ಹೊಲದಲ್ಲಿ ಒಕ್ಕಲು ಮಾಡಲು ಸಂಗ್ರಹಿಸಿದ ಮೆಕ್ಕೆಜೋಳಕ್ಕೆ ಗುರುವಾರ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ.

ಐದು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಒಕ್ಕಲು ಮಾಡಲು ಹೊಲದಲ್ಲಿ ಸಂಗ್ರಹಿಸಿದ್ದರು. ಅಂದು ಮಧ್ಯಾಹ್ನ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಅಪಾರ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು.

ಈ ಕುರಿತು ಜಮೀನಿನ ಮಾಲೀಕ ಚಂದ್ರಶೇಖರ ಅಂದಾಜು ₹ 3ಲಕ್ಷದಷ್ಟು ಬೆಳೆಹಾನಿಯಾಗಿದೆ ಎಂದು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.