
ಹುಬ್ಬಳ್ಳಿ: ಇಲ್ಲಿನ ಕೆಎಲ್ಇ ಸಂಸ್ಥೆಯ ಬಿಬಿಎ ಕಾಲೇಜು ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ಎಐ ಕನೆಕ್ಟ್’ ಎಂಬ ಕೃತಕ ಬುದ್ಧಿಮತ್ತೆ (ಎಐ) ಪ್ರದರ್ಶನದಲ್ಲಿ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಎ.ಎಂ. ಖಾನ್, ‘ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಸಾಕ್ಷರತೆ ಮೂಡಿಸುವ ನಿಟ್ಟಿನಲ್ಲಿ ಇದು ಉತ್ತಮ ಕಾರ್ಯಕ್ರಮ’ ಎಂದು ಶ್ಲಾಘಿಸಿದರು.
ಪ್ರಾಯೋಗಿಕ ಎಐ ಪರಿಕರಗಳ ಪ್ರದರ್ಶನ, ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿದ ಎಐ ಆಧಾರಿತ ಮಾದರಿಗಳು, ಎಐ ಪ್ರವೃತ್ತಿಗಳು, ನೈತಿಕತೆ ಮತ್ತು ಅನ್ವಯಗಳ ಸಂಶೋಧನೆಗಳ ಕುರಿತು ವಿದ್ಯಾರ್ಥಿಗಳು ವಿವರಣೆ ನೀಡಿದರು.
ಆರೋಗ್ಯ, ಶಿಕ್ಷಣ, ವ್ಯವಹಾರ ವಿಶ್ಲೇಷಣೆ, ರೋಬೊಟ್, ಸಂವಹನ ಮತ್ತಿತರ ನಿತ್ಯ ಜೀವನದ ಸಂಗತಿಗಳಲ್ಲಿ ಕೃತಕ ಬುದ್ಧಿಮತ್ತೆಗಳು ಹೇಗೆ ಆಮೂಲಾಗ್ರವಾಗಿ ಬದಲಾವಣೆ ತರುತ್ತಿವೆ ಎಂಬ ಅಂಶವನ್ನು ಪ್ರದರ್ಶನವು ತೆರೆದಿಟ್ಟಿತು.
ಬೋಧಕ ಸಿಬ್ಬಂದಿ ಶಿಲ್ಪಾ ಸವದತ್ತಿ, ಮಹೇಶ ಹುಡೇದ, ಶ್ರೀದೇವಿ ಅರಳಿಕಟ್ಟಿ, ರಮಾಕಾಂತ ದೇವಗೋಜಿ, ಬಸಿತ್ ಬಿನ್ನಲ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.