ಧಾರವಾಡ: ‘ಆಲ್ಕೋಹಾಲಿಕ್ಸ್ ಅನಾನಿಮಸ್’ ಗುಂಪು ವಿಶ್ವದ ಜನರು ಸ್ವಯಂ ಪ್ರೇರಿತರಾಗಿ ರಚಿಸಿಕೊಂಡಿರುವ ಸಹಯೋಗವಾಗಿದೆ. ಮದ್ಯವರ್ಜನೆ ಆಕಾಂಕ್ಷೆಯುಳ್ಳವರು ಈ ಗುಂಪಿನ ಸದಸ್ಯರಾಗಬಹುದು, ಸದಸ್ಯತ್ವಕ್ಕೆ ಶುಲ್ಕ ಇಲ್ಲ’ ಎಂದು ಡಿಮಾನ್ಸ್ ನಿರ್ದೇಶಕ ಡಾ.ಅರುಣಕುಮಾರ ಸಿ. ಹೇಳಿದರು.
ಡಿಮಾನ್ಸ್‌ನಲ್ಲಿ ಆಲ್ಕೋಹಾಲಿಕ್ಸ್ ಅನಾನಿಮಸ್ ಉತ್ತರ ಕರ್ನಾಟಕ ವಿಭಾಗದ ಗುಂಪಿನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘180 ದೇಶಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚು ಆಲ್ಕೋಹಾಲಿಕ್ಸ್ ಅನಾನಿಮಸ್ ಗುಂಪುಗಳಿವೆ. 22 ಲಕ್ಷಕ್ಕಿಂತ ಹೆಚ್ಚು ಸದಸ್ಯರು ಇದ್ದಾರೆ. ಭಾರತದಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಗುಂಪುಗಳಿದ್ದು, 30 ಸಾವಿರಕ್ಕಿಂತಲೂ ಹೆಚ್ಚು ಸದಸ್ಯರು ಇದ್ದಾರೆ. ಪ್ರತಿವಾರ 1,250 ಕಿಂತಲೂ ಹೆಚ್ಚು ಈ ಗುಂಪಿನ ಸಭೆಗಳು ನಡೆಯುತ್ತಿವೆ. ಡಿಮಾನ್ಸ್‌ನಲ್ಲೂ ಆಲ್ಕೋಹಾಲಿಕ್ಸ್ ಅನಾನಿಮಸ್ ಸಭೆಗಳನ್ನು ವಾರಕ್ಕೊಮ್ಮೆ ಆಯೋಜಿಲಾಗುವುದು’ ಎಂದರು.
ಡಿಮಾನ್ಸ್‌ನಲ್ಲಿ ಆಲ್ಕೋಹಾಲಿಕ್ಸ್ ಅನಾನಿಮಸ್ ಗುಂಪು ಚರ್ಚೆಯನ್ನು ಪ್ರತಿ ಬುಧವಾರ ಸಂಜೆ 5ರಿಂದ 6.30 ರವರಗೆ ನಡೆಸಲು ನಿರ್ಧರಿಸಲಾಗಿದೆ. ಮಾಹಿತಿಗಾಗಿ ಸಹಾಯವಾಣಿ 14416 ಸಂಪರ್ಕಿಸಬಹುದು.
ಡಿಮಾನ್ಸ್ ಮುಖ್ಯ ಆಡಳಿತಾಧಿಕಾರಿ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಸಹ ಪ್ರಾಧ್ಯಾಪಕ ಡಾ.ಶ್ರೀನಿವಾಸ ಕೊಸಗಿ, ಡಾ.ಮಂಜುನಾಥ ಭಜಂತ್ರಿ, ಡಾ.ಮಹೇಶ ಮಹದೇವಯ್ಯ, ಡಾ.ಮೇಘಮಾಲಾ ತಾವರಗಿ, ಮಲ್ಲಿಕಾ ಬಿ.ಎನ್. ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.