ADVERTISEMENT

ಅಳ್ನಾವರ: ನವರಾತ್ರಿ ಪ್ರಯುಕ್ತ ದುರ್ಗಾ ದೌಡಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 5:03 IST
Last Updated 24 ಸೆಪ್ಟೆಂಬರ್ 2025, 5:03 IST
ಅಳ್ನಾವರದ ಹಿಂದೂ ಜಾಗರಣಾ ವೇದಿಕೆ ನವರಾತ್ರಿ ಪ್ರಯುಕ್ತ ಹಮ್ಮಿಕೊಂಡ ದುರ್ಗಾದೌಡ್ ಅನ್ನು ಮಹಿಳೆಯರು ಆರತಿ ಮಾಡಿದರು
ಅಳ್ನಾವರದ ಹಿಂದೂ ಜಾಗರಣಾ ವೇದಿಕೆ ನವರಾತ್ರಿ ಪ್ರಯುಕ್ತ ಹಮ್ಮಿಕೊಂಡ ದುರ್ಗಾದೌಡ್ ಅನ್ನು ಮಹಿಳೆಯರು ಆರತಿ ಮಾಡಿದರು   

ಅಳ್ನಾವರ: ನವರಾತ್ರಿ ಪ್ರಯುಕ್ತ ಇಲ್ಲಿನ ಹಿಂದೂ ಜಾಗರಣಾ ಸಮಿತಿ ಹಮ್ಮಿಕೊಂಡ ದುರ್ಗಾದೌಡ್‌ ಕಾರ್ಯಕ್ರಮಕ್ಕೆ ಗ್ರಾಮದೇವಿ ದೇವಸ್ಥಾನದ ಎದುರು ಮಂಗಳವಾರ ಚಾಲನೆ ನೀಡಲಾಯಿತು.

ತ್ರಿಶೂಲಕ್ಕೆ ಪೂಜೆ ಸಲ್ಲಿಸುವ ಮೂಲಕ ದೌಡ್‌ ಆರಂಭವಾಯಿತು. ಯುವಕರು ಬಿಳಿ ಶುಭ್ರ ಬಟ್ಟೆ ತೊಟ್ಟು ದೇವಿ ನೆನೆಯುತ್ತಾ, ಧರ್ಮದ ಗೋಷಣೆ ಕೂಗುತ್ತಾ ಹೆಜ್ಜೆ ಹಾಕಿದರು. ವಿವಿಧೆಡೆ ಬಣ್ಣ ಬಣ್ಣದ ಪರಪರಿ ಕಟ್ಟಲಾಗಿತ್ತು. ಪ್ರತಿ ಮನೆ ಎದುರು ದೌಡ್‌ ಬಂದಾಗ ಆರತಿ ಮಾಡಿ ಭಕ್ತಿಯಿಂದ ನಮಿಸಲಾಯಿತು.

ಭಕ್ತರು ಕೈಯಲ್ಲಿ ದೇವಿ ಪೋಟೊ ಹಾಗೂ ತ್ರಿಶೂಲ ಧ್ವಜ ಹಿಡಿದು ದುರ್ಗಾಮಾತೆ ಜಯ ಗೋಷದೊಂದಿಗೆ ಭಾಗವಹಿಸಿದ್ದರು.  ಸಾರ್ವಜನಿಕರು ಹಸಿರು ತಳಿರು ತೋರಣಗಳಿಂದ ಬೀದಿ ಅಲಂಕರಿಸಿ ಹಾದಿಯಲ್ಲಿ ದೀಪ ಬೆಳಗಿಸಿ, ದೌಡಗೆ ಸಂಭ್ರಮದಿಂದ ಸ್ವಾಗತಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.