ADVERTISEMENT

ಅಳ್ನಾವರ: ಸಾಹಿತ್ಯ ಸಮ್ಮೇಳನಕ್ಕೆ ವೈದ್ಯ ಮೂಡಬಾಗಿಲ್ ಅಧ್ಯಕ್ಷತೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 14:04 IST
Last Updated 10 ಏಪ್ರಿಲ್ 2025, 14:04 IST
ಅಳ್ನಾವರ ತಾಲ್ಲೂಕ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಬಸವರಾಜ ಮೂಡಬಾಗಿಲ್ ಅವರನ್ನು ಅಭಿನಂದಿಸಿ, ಆಮಂತ್ರಣ ನೀಡಲಾಯಿತು
ಅಳ್ನಾವರ ತಾಲ್ಲೂಕ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಬಸವರಾಜ ಮೂಡಬಾಗಿಲ್ ಅವರನ್ನು ಅಭಿನಂದಿಸಿ, ಆಮಂತ್ರಣ ನೀಡಲಾಯಿತು   

ಅಳ್ನಾವರ: ಇದೇ ತಿಂಗಳು ಕೊನೆಯ ವಾರದಲ್ಲಿ ಪಟ್ಟಣದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಮಟ್ಟದ 5ನೇ ಸಮ್ಮೇಳನದ ಅಧ್ಯಕ್ಷರಾಗಿ ಸ್ಥಳೀಯ ವೈದ್ಯರಾದ ಬಸವರಾಜ ಮೂಡಬಾಗಿಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಕಸಪಾ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ ನೇತೃತ್ವದಲ್ಲಿ ಅಂಬೇಡ್ಕರ್ ಭವನದಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಬಳಿಕ ಕಸಾಪ ಸದಸ್ಯರು ಮೂಡಬಾಗಿಲ್ ಅವರ ಮನೆಗೆ ತೆರಳಿ ಸತ್ಕರಿಸಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗುರುರಾಜ ಸಬನೀಸ್, ‘ಮಲೆನಾಡಿನ ಸೆರಗಿನ ಈ ಭಾಗದಲ್ಲಿ ಕನ್ನಡ ಭಾಷೆಯ ನೆಲೆಗಟ್ಟನ್ನು ಸದೃಢಗೊಳಿಸಲು ಹಲವು ದಶಕಗಳಿಂದ ಮೂಡಬಾಗಿಲ್ ಅವರು ವೈದ್ಯಕೀಯ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಇತರರಿಗೆ ಮಾದರಿಯಾಗಿದೆ’ ಎಂದರು.

ADVERTISEMENT

ಹಿರಿಯರಾದ ಶಿವಾನಂದ ಬಾವಿಕಟ್ಟಿ, ಮೂಡಬಾಗಿಲ್ ಅವರ ಪತ್ನಿ ಸರಸ್ವತಿ, ಶಿವಾಜಿ ಡೊಳ್ಳಿನ, ಎಸ್.ಡಿ. ದೇಗಾವಿಮಠ, ಪೂರ್ಣಿಮಾ ಮುತ್ನಾಳ, ವೈ.ವಿ. ಶಿಂಪಿ, ಬೆಟಗೇರಿ, ಸಂಜನಾ ವಾಘಮೋಡೆ, ಮಂಜುಳಾ ಮೇದಾರ, ಪಟ್ಟಣ ಪಂಚಾಯಿತಿ ಸದಸ್ಯೆ ರೇಶ್ಮಿ ತೇಗೂರ, ಮಂಜುಳಾ ಅಂಬಡಗಟ್ಟಿ, ಉಮೇಶ ದೊಡ್ಡಮನಿ, ಚರಂತಿಮಠ, ಶಕುಂತಲಾ ದೇಗಾವಿಮಠ, ಪ್ರವೀಣ ಪವಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.