ADVERTISEMENT

ಸಿದ್ದಪ್ಪಜ್ಜನವರ ಜಾತ್ರೆ ಡಿ. 16ರಿಂದ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 15:49 IST
Last Updated 3 ಡಿಸೆಂಬರ್ 2022, 15:49 IST
ಅಮರಗೋಳದ ಹಠಯೋಗಿ ಸದ್ಗುರು ಸಿದ್ದಪ್ಪಜ್ಜ
ಅಮರಗೋಳದ ಹಠಯೋಗಿ ಸದ್ಗುರು ಸಿದ್ದಪ್ಪಜ್ಜ   

ಹುಬ್ಬಳ್ಳಿ: ನಗರದ ಅಮರಗೋಳದ ಹಠಯೋಗಿ ಸದ್ಗುರು ಸಿದ್ದಪ್ಪಜ್ಜನವರ 163ನೇ ಜಯಂತಿ ಅಂಗವಾಗಿ, ಡಿ. 16ರಿಂದ 20ರವರೆಗೆ ಐದು ದಿನಗಳ ಜಾತ್ರಾ ಮಹೋತ್ಸವ ಜರುಗಲಿದೆ. ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಿತ್ಯ ಸಂಜೆ ಶಿವಾನುಭವ ಪ್ರವಚನ ನಡೆಯಲಿದೆ. ನಂತರ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಡಿ. 20ರಂದು ಬೆಳಿಗ್ಗೆ ಸಿದ್ದಪ್ಪಜ್ಜನ ಮಠದಲ್ಲಿ ಅಭಿಷೇಕ, ತೊಟ್ಟಿಲೋತ್ಸವ ಹಾಗೂ ಉಣಕಲ್ಲ ಸದ್ಗುರು ಸಿದ್ದಪ್ಪಜ್ಜನವರ ಮೂಲ ಗದ್ದುಗೆ ಮಠದಿಂದ ಜ್ಯೋತಿ ತರುವ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಸಿದ್ದಪ್ಪಜ್ಜನವರ ಉತ್ಸವ ಮೂರ್ತಿಯ ಮೆರವಣಿಗೆ ಹಾಗೂ ಸಂಜೆ 5.30ಕ್ಕೆ ಮಹಾ ರಥೋತ್ಸವ ಜರುಗಲಿದೆ.

ಐದು ದಿನಗಳ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೇವರ ಹುಬ್ಬಳ್ಳಿ ಸಿದ್ದಾಶ್ರಮದ ಸಿದ್ದಶಿವಯೋಗಿಗಳು, ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಅಮ್ಮಿನಬಾವಿ ಪಂಚಗ್ರಹ ಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಹಾವೇರಿಯ ಅಕ್ಕಿ ಮಠದ ಗುರುಲಿಂಗ ಸ್ವಾಮೀಜಿ, ಹಿಪ್ಪರಗಿಯ ಪ್ರಭುಜಿ ಮಹಾರಾಜರು ಹಾಗೂ ತಾಳಿಕೋಟಿಯ ಸಿದ್ಧಲಿಂಗ ದೇವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.