ADVERTISEMENT

ಸಮಾನತೆ ಪ್ರತಿಪಾದಿಸಿದ್ದ ಅಂಬೇಡ್ಕರ್‌: ಅಮರೇಶ ಪಮ್ಮಾರ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 2:42 IST
Last Updated 15 ಏಪ್ರಿಲ್ 2022, 2:42 IST
ಅಳ್ನಾವರದಲ್ಲಿ ನಡೆದ ಡಾ. ಬಿ. ಆರ್.ಅಂಬೇಡ್ಕರ್ ಹಾಗೂ ಭಗವಾನ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು
ಅಳ್ನಾವರದಲ್ಲಿ ನಡೆದ ಡಾ. ಬಿ. ಆರ್.ಅಂಬೇಡ್ಕರ್ ಹಾಗೂ ಭಗವಾನ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು   

ಅಳ್ನಾವರ: ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಭಗವಾನ ಮಹಾವೀರರ ಆದರ್ಶಗಳು ಸದಾ ನಮ್ಮ ಬದುಕಿಗೆ ಪ್ರೇರಣೆ ಎಂದು ತಹಶೀಲ್ದಾರ್ ಅಮರೇಶ ಪಮ್ಮಾರ ಹೇಳಿದರು.

ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯ್ತಿ ಹಾಗೂ ವಿವಿಧ ದಲಿತ ಸಂಘಟನೆಗಳ ಸಹಯೋಗದಲ್ಲಿ ನಡೆದ ಡಾ. ಅಂಬೇಡ್ಕರ್ ಮತ್ತು ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಲಿತ ಸಮಾಜದ ಮುಖಂಡ ಪ್ರವೀಣ ಪವಾರ ಮತ್ತು ಜೈನ ಸಮಾಜದ ಹಿರಿಯರಾದ ಶೀತಲ ಬೆಟದೂರ ಮಾತನಾಡಿದರು.

ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಸಂತೋಷ ತಳಕಲ್, ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ನದೀಮ ಕಂಟ್ರಾಕ್ಟರ್, ಎಂಎಸ್ಐಎಲ್‌ ನಿರ್ದೇಶಕ ಶಿವಾಜಿ ಡೊಳ್ಳಿನ, ನಾರಾಯಣ ಮೋರೆ, ಪಟ್ಟಣ ಪಂಚಾಯ್ತಿ ಸದಸ್ಯರಾದ ಮಧು ಬಡಸ್ಕರ, ರೂಪೇಶ ಗುಂಡಕಲ್, ನೇತ್ರಾವತಿ ಕಡಕೋಳ, ರಾಜು ಯಲಕಪಾಟಿ, ಮಂಗಳಾ ರವಳಪ್ಪನವರ, ತಮೀಮ ತೇರಗಾವಂ, ಅನ್ನಪೂರ್ಣ ಕೌಜಲಗಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.