
ಪ್ರಜಾವಾಣಿ ವಾರ್ತೆ
ಅಣ್ಣಿಗೇರಿ: ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಕರ್ನಾಟಕ ದಲಿತ ವಿಮೋಚನಾ ಸಮಿತಿಯ ತಾಲ್ಲೂಕು ಘಟಕ ಹಾಗೂ ಜೈ ಭೀಮ್ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದಲಿತ ಮಹಾ ಒಕ್ಕೂಟದ ವತಿಯಿಂದ ಶನಿವಾರ ಮೆರವಣಿಗೆ ನಡೆಯಿತು.
ಸ್ವಾಮಿ ವಿವೇಕಾನಂದ ವೃತ್ತದಿಂದ ಪುರಸಭೆ ಆವರಣದಲ್ಲಿರುವ ಬಿ.ಆರ್.ಅಂಬೇಡ್ಕರ್ ಪ್ರತಿಮೆವರೆಗೆ ಸಂಘಟನೆಗಳ ಸದಸ್ಯರು ಸಾಗಿದರು.
ಈ ಸಂದರ್ಭದಲ್ಲಿ ಷಣ್ಮುಖ ಗುರಿಕಾರ, ಚಂಬಣ್ಣ ಹಾಳದೋಟರ, ಮಾರುತಿ ಮರಡ್ಡಿ, ದಯಾನಂದ ಕೊಂಗವಾಡ, ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ, ನಾಗಪ್ಪ ದಳವಾಯಿ, ಮುದಕಣ್ಣ ಕೊರವರ, ಮಂಜುನಾಥ ಮಾಯಣ್ಣವರ, ರೈತ ಮುಖಂಡರಾದ ಭಗವಂತಪ್ಪ ಪುಟ್ಟಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.