ADVERTISEMENT

ರೈತರು ಸುರಕ್ಷಿತವಾಗಿದ್ದರೆ ನಾಡು ಸಮೃದ್ಧ: ದಿನೇಶ ಕುಲಕರ್ಣಿ

ಅಣ್ಣಿಗೇರಿ ತಾಲೂಕು ಭಾರತೀಯ ಕಿಸಾನ ಸಂಘದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 7:07 IST
Last Updated 18 ಫೆಬ್ರುವರಿ 2026, 7:07 IST
ಅಣ್ಣಿಗೇರಿ ಬಸ್ ನಿಲ್ದಾಣ ಹತ್ತಿರವಿರುವ ರೈತ ವೇದಿಕೆಯಲ್ಲಿ ನೂತನ ತಾಲ್ಲೂಕು ಭಾರತೀಯ ಕಿಸಾನ್‌ ಸಂಘಕ್ಕೆ ಚಾಲನೆ ನೀಡಲಾಯಿತು
ಅಣ್ಣಿಗೇರಿ ಬಸ್ ನಿಲ್ದಾಣ ಹತ್ತಿರವಿರುವ ರೈತ ವೇದಿಕೆಯಲ್ಲಿ ನೂತನ ತಾಲ್ಲೂಕು ಭಾರತೀಯ ಕಿಸಾನ್‌ ಸಂಘಕ್ಕೆ ಚಾಲನೆ ನೀಡಲಾಯಿತು   

ಅಣ್ಣಿಗೇರಿ: ರೈತರು ಸುರಕ್ಷಿತವಾಗಿದ್ದರೆ ನಾಡು, ರಾಷ್ಟ್ರ ಸುಭಿಕ್ಷವಾಗಿ ಸಮೃದ್ಧಿಯಾಗಲು ಸಾಧ್ಯ. ಇಂದಿನ ರೈತರು ಆಧುನಿಕ ಕೃಷಿ ತಂತ್ರಜ್ಞಾನದ ಬಳಕೆಗೆ ಹೆಚ್ಚು ಗಮನ ಹರಿಸಿದ ಪರಿಣಾಮ ಪ್ರಚಲಿತವಾಗಿ ಕೃಷಿ ಕ್ಷೇತ್ರದಲ್ಲಿ ಬಳಕೆ ಪ್ರಮಾಣ ಹೆಚ್ಚು ಕಂಡುಬರುತ್ತಿದೆ ಎಂದು ಭಾರತೀಯ ಕಿಸಾನ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಿನೇಶ ಕುಲಕರ್ಣಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣ ಪಕ್ಕದಲ್ಲಿರುವ ರೈತ ಹೋರಾಟ ಸಮಿತಿ ವೇದಿಕೆಯಲ್ಲಿಸೋಮವಾರ ಅಣ್ಣಿಗೇರಿ ತಾಲ್ಲೂಕು ಭಾರತೀಯ ಕಿಸಾನ ಸಂಘ ಆಯೋಜಿಸಿದ್ದ ಸಂಘದ ಉದ್ಘಾಟನೆ, ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ರೈತ ಮುಖಂಡರಾದ ಚಂಬಣ್ಣ ಸುರಕೋಡ, ಸೋಮಶೇಖರ ಹಿರೇಮಠ, ರವಿರಾಜ ವೇರ್ಣೆಕರ ಮಾತನಾಡಿದರು. ವಿವೇಕ ಮೊರೆ, ಗುರುನಾಥಗೌಡ, ಷಣ್ಮುಖ ಕಲ್ಲೂರ, ಡಿ.ಬಿ.ನರಗುಂದ, ದೇವರಾಜ ದಾಡಿಬಾವಿ, ಮಹಾಬಲೇಶ್ವರ ಹೆಬಸೂರ, ಪಂಚಾಕ್ಷರಿ ಬಿಳೇಬಾಳ, ರಮೇಶ ಗೊರಗೇರಿ, ಮಂಜುನಾಥ ಅಕ್ಕಿ, ಭಗವಂತಪ್ಪ ಪುಟ್ಟಣ್ಣವರ,ರಮೇಶ ಕೋರವಿ, ಭೀಮಣ್ಣ ಜಂತ್ಲಿ, ಕೃಷ್ಣ ಭಜಂತ್ರಿ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.