ADVERTISEMENT

ಅಳ್ನಾವರ: ಮಹಾದ್ವಾರ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಮೇ 2022, 3:22 IST
Last Updated 5 ಮೇ 2022, 3:22 IST
ಅಳ್ನಾವರ ತಾಲ್ಲೂಕಿನ ಹೊನ್ನಾಪೂರ ಗ್ರಾಮದ ಅಲ್ಲಮಪ್ರಭು ಮಹಾದ್ವಾರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಮಾಜಿ ಶಾಸಕ ನಾಗರಾಜ ಛಬ್ಬಿ ಇದ್ದಾರೆ
ಅಳ್ನಾವರ ತಾಲ್ಲೂಕಿನ ಹೊನ್ನಾಪೂರ ಗ್ರಾಮದ ಅಲ್ಲಮಪ್ರಭು ಮಹಾದ್ವಾರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಮಾಜಿ ಶಾಸಕ ನಾಗರಾಜ ಛಬ್ಬಿ ಇದ್ದಾರೆ   

ಅಳ್ನಾವರ: ತಾಲ್ಲೂಕಿನ ಶ್ರೀ ಕ್ಷೇತ್ರ ಹೊನ್ನಾಪೂರ ಗ್ರಾಮದ ಆರಾಧ್ಯ ದೈವ ಅಲ್ಲಮಪ್ರಭು ದೇವಸ್ಥಾನಕ್ಕೆ ಸ್ವಾಗತ ಕೋರುವ ಮಹಾದ್ವಾರ ನಿರ್ಮಾಣ ಕಾರ್ಯಕ್ಕೆ ಮಾಜಿ ಶಾಸಕ ನಾಗರಾಜ ಛಬ್ಬಿ ಭೂಮಿಪೂಜೆ ನೇರವೇರಿಸಿದರು.

ನಂತರ ಮಾತನಾಡಿ, ಅಲ್ಲಮಪ್ರಭು ದೇವಸ್ಥಾನ ಈ ಭಾಗದ ಜಾಗೃತ ಸ್ಥಳ, ಗ್ರಾಮಸ್ಥರು ನಿತ್ಯ ಪೂಜಿಸುವ ಭಕ್ತಿ ದೇಗುಲಕ್ಕೆ ಭಕ್ತರು ಆಗಮಿಸಲು ಸ್ವಾಗತ ಗೋಪುರ ನಿರ್ಮಾಣ ಕಾರ್ಯ ಕೈಗೊಂಡಿರುವುದು ಉತ್ತಮ ಕಾರ್ಯ. ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸುವೆ ಎಂದರು.

ಹಿರಿಯರಾದ ಮಹಾವೀರ ಧರೆಣ್ಣವರ ಮಾತನಾಡಿ, ಸುಮಾರು ₹ 25 ಲಕ್ಷ ವೆಚ್ಚದಲ್ಲಿ ಕಮಾನು ಕಟ್ಟಲಾಗುವುದು. ಸುಂದರ ಗೋಪುರದಲ್ಲಿ ಅಲ್ಲಮಪ್ರಭು, ಬಸವಣ್ಣ ಹಾಗೂ ನಂದಿ ಮೂರ್ತಿ ಪ್ರತಿಷ್ಠಾಪಿಸಲಾಗುವದು ಎಂದರು.
ಹಿರಿಯರಾದ ಎಚ್.ಆರ್. ಸನದಿ, ಮರುತಿ ಕಲಾಜ, ರಮೇಶ ಹೂಗಾರ, ಮಲ್ಲಯ್ಯ ಮಠಪತಿ. ಕಿರಣ ಪಾಟೀಲ, ಕುಲಕರ್ಣಿ, ಪರಪ್ಪ ಹುದ್ದಾರ, ಶಂಕರ ಮುಗಳಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.