ADVERTISEMENT

ವಿನಯ ಕುಲಕರ್ಣಿ ಬಂಧನ; ಕಾಂಗ್ರೆಸ್‌ನಿಂದ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 10:29 IST
Last Updated 6 ನವೆಂಬರ್ 2020, 10:29 IST
ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಶುಕ್ರವಾರ ಹುಬ್ಬಳ್ಳಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಅವರಿಗೆ ಸಲ್ಲಿಸಿದ ಕಾಂಗ್ರೆಸ್‌ ಮುಖಂಡರು
ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಶುಕ್ರವಾರ ಹುಬ್ಬಳ್ಳಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಅವರಿಗೆ ಸಲ್ಲಿಸಿದ ಕಾಂಗ್ರೆಸ್‌ ಮುಖಂಡರು   

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಹೆಸರನ್ನು ವಿನಾಕಾರಣ ತರಲಾಗಿದೆ. ಅವರಿಗೆ ನ್ಯಾಯ ಕೊಡಿಸಬೇಕು ಎಂದು ಹುಬ್ಬಳ್ಳಿ ಕಾಂಗ್ರೆಸ್‌ ಮುಖಂಡರು ಆಗ್ರಹಿಸಿದರು.

ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಶುಕ್ರವಾರ ನಗರದಲ್ಲಿ ಹುಬ್ಬಳ್ಳಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಅವರಿಗೆ ಸಲ್ಲಿಸಿದ ಕಾಂಗ್ರೆಸ್‌ ಮುಖಂಡರು ‘ವಿಜಯ ಮತ್ತು ವಿನಯ ಕುಲಕರ್ಣಿ ಅವರ ಜನಸೇವೆ, ರಾಜಕೀಯ ಬೆಳವಣಿಗೆ ಸಹಿಸಿಕೊಳ್ಳದೆ ಕೆಲ ಕುತಂತ್ರಿಗಳ ಬುದ್ಧಿಗೆ ತಲೆಬಾಗಿ ಸಿಬಿಐ ಅವರನ್ನು ಬಂಧಿಸಿದೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹುಸೇನ್‌ ಹಳ್ಳೂರ, ಮುಖಂಡರಾದ ಬಂಗಾರೇಶ ಹಿರೇಮಠ, ರಾಜಶೇಖರ ಮೆಣಸಿನಕಾಯಿ, ಶರಣಪ್ಪ ಕೋಟಗಿ, ಮೋಹನ ಹಿರೇಮನಿ, ಮೋಹನ ಹೊಸಮನಿ, ಸುರೇಶ ಸವನೂರ, ಕಲ್ಲಪ್ಪ ಎಲಿವಾಳ, ಶಹಜಮಾನ್ ಮುಜಾಹೀದ್, ಬಸವರಾಜ ಕಿತ್ತೂರ, ಬಸವರಾಜ ಮೆಣಸಗಿ, ಕುಂದನಹಳ್ಳಿ, ಸೂರ್ಯಕಾಂತ ಘೋಡಕೆ, ರಾಜೀವ ಲದ್ವಾ, ಯಲ್ಲಪ್ಪ ಮೇಹರವಾಡೆ, ಶಾರುಖ್‌ ಮುಲ್ಲಾ, ವೀರಣ್ಣ ನಿರಲಗಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.