ADVERTISEMENT

ಅಥ್ಲೆಟಿಕ್ಸ್: ಕನಕದಾಸ, ಜೆ.ಜಿ. ಕಾಲೇಜಿಗೆ ಸಮಗ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 1:50 IST
Last Updated 26 ಫೆಬ್ರುವರಿ 2021, 1:50 IST
ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಹುಬ್ಬಳ್ಳಿ ನಗರ ತಾಲ್ಲೂಕು ಮಟ್ಟದ ಅಥ್ಲೆಟಿಕ್‌ ಕ್ರೀಡಾಕೂಟದ ಓಟದ ಸ್ಪರ್ಧೆಗೆ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಚಾಲನೆ ನೀಡಿದರು
ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಹುಬ್ಬಳ್ಳಿ ನಗರ ತಾಲ್ಲೂಕು ಮಟ್ಟದ ಅಥ್ಲೆಟಿಕ್‌ ಕ್ರೀಡಾಕೂಟದ ಓಟದ ಸ್ಪರ್ಧೆಗೆ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಚಾಲನೆ ನೀಡಿದರು   

ಹುಬ್ಬಳ್ಳಿ: ಚುರುಕಿನ ಪ್ರದರ್ಶನ ತೋರಿದ ಕನಕದಾಸ (43 ಅಂಕಗಳು) ಹಾಗೂ ಜೆ.ಜಿ. ಕಾಲೇಜು (42 ಅಂಕಗಳು) ತಂಡಗಳು ಇಲ್ಲಿನ ಬಿವಿಬಿ ಕಾಲೇಜಿನ ಮೈದಾನದಲ್ಲಿ ನಡೆದ ಹುಬ್ಬಳ್ಳಿ ನಗರ ತಾಲ್ಲೂಕು ಮಟ್ಟದ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡವು.

ಕೆಎಲ್‌ಇ ಸಂಸ್ಥೆಯ ಪಿ.ಸಿ. ಜಾಬಿನ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಬಾಲಕರ ವಿಭಾಗದಲ್ಲಿ ಪಿ.ಸಿ. ಜಾಬಿನ ಕಾಲೇಜು (19) ಮತ್ತು ಫಾತಿಮಾ ಕಾಲೇಜು (18) ಕ್ರಮವಾಗಿ ನಂತರದ ಎರಡು ಸ್ಥಾನಗಳನ್ನು ಪಡೆದುಕೊಂಡರು. ಬಾಲಕಿಯರ ವಿಭಾಗದ ಎರಡನೇ ಸ್ಥಾನ ಚಿನ್ಮಯ ಕಾಲೇಜು, ಮೂರನೇ ಸ್ಥಾನ ಪಿ.ಸಿ. ಜಾಬಿನ ಕಾಲೇಜಿನ ಪಾಲಾಯಿತು. ಜಾಬಿನ ಕಾಲೇಜಿನ ಪಿ. ಪ್ರಕಾಶ (ಬಾಲಕರ ವಿಭಾಗ)13 ಅಂಕ, ಜೆಜಿ ಕಾಲೇಜಿನ ಸಂಜನಾ ಮಲ್ಲಾಪುರ (ಬಾಲಕಿಯರ ವಿಭಾಗ) 15 ಅಂಕ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು.

ಬಾಲಕರ 100 ಮೀಟರ್‌ ಓಟದಲ್ಲಿ ಕನಕದಾಸ ಕಾಲೇಜಿನ ಅಂಕಿತ್‌ ಅಕ್ಕಿ (ಕಾಲ: 11.56ಸೆಕೆಂಡ್), ಫಾತಿಮಾ ಕಾಲೇಜಿನ ಆಕಾಶ ಬಂಡಿ (12.35ಸೆ.), ಜೆ.ಜಿ. ಕಾಲೇಜಿನ ಶ್ರೇಯಸ್‌ ಉಪ್ಪಿನ (12.75ಸೆ.), ಇದೇ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಜೆ.ಜಿ. ಕಾಲೇಜಿನ ಸಂಜನಾ ಮಲ್ಲಾಪುರ (13.22ಸೆ.), ಸರ್ಕಾರಿ ಪದವಿಪೂರ್ವ ಕಾಲೇಜಿನ ಸಿಮ್ರಾನ್‌ ಮೊರಬ (15.03ಸೆ.) ಮತ್ತು ಕೆಎಲ್‌ಇ ಕಾಮರ್ಸ್‌ ಕಾಲೇಜಿನ ದಿಶಾ ಕೆ. (16.07ಸೆ.) ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡರು.

ADVERTISEMENT

ಉದ್ಘಾಟನೆ: ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಜಾಬಿನ ಕಾಲೇಜಿನ ಪ್ರಾಚಾರ್ಯ ಡಾ. ಲಿಂಗರಾಜ ಡಿ. ಹೊರಕೇರಿ ಸೇರಿದಂತೆ ಹಲವು ಗಣ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.