ADVERTISEMENT

ಗುಜ್ಜಾರಪ್ಪ ಸೇರಿ ನಾಲ್ವರಿಗೆ ಪ್ರಶಸ್ತಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 18:44 IST
Last Updated 21 ನವೆಂಬರ್ 2025, 18:44 IST
   

ಧಾರವಾಡ: ಡಿ.ವಿ.ಹಾಲಭಾವಿ ರಾಷ್ಟ್ರೀಯ ಟ್ರಸ್ಟ್‌ ನೀಡುವ ಕಲಾತಪಸ್ವಿ ಪ್ರಶಸ್ತಿಗೆ ಚಿತ್ರಕಲಾವಿದ ಬಿ.ಜಿ.ಗುಜ್ಜಾರಪ್ಪ, ‘ಕುಂಚ ಕಲಾಶ್ರೀ’ ಪ್ರಶಸ್ತಿಗೆ ಕಲಬುರಗಿಯ ಕಲಾವಿದ ಚಂದ್ರಹಾಸ ವೈ.ಜಾಲಿಹಾಳ, ಯುವಕುಂಚ ಕಲಾಶ್ರೀ ಪ್ರಶಸ್ತಿಗೆ ಮುಂಬೈನ ದೀಪಾಲಿ ಸಂದೇಶಖುಲೆ ಎಸ್., ಉತ್ತರಕನ್ನಡ ಜಿಲ್ಲೆಯ ನಾಮದೇವ ಪಟ್ಟೇಕರ ಆಯ್ಕೆ ಯಾಗಿದ್ದಾರೆ.

ಕಲಾತಪಸ್ವಿ ಪ್ರಶಸ್ತಿ ₹1 ಲಕ್ಷನಗದು, ಕುಂಚ ಕಲಾಶ್ರೀ ಪ್ರಶಸ್ತಿ₹50 ಸಾವಿರ ನಗದು ಹಾಗೂ ಯುವಕುಂಚ ಕಲಾಶ್ರೀ ಪ್ರಶಸ್ತಿ ತಲಾ ₹25 ಸಾವಿರ ನಗದು, ಸ್ಮರಣಿಕೆ ಒಳಗೊಂಡಿವೆ.

ನಗರದಲ್ಲಿ ನ.29ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.